ತಂದನನಾರ ತಂದಾನಾನ ತಂದನನ
ಓಓಓ ...
ತಂದನ ತಾನ ತಂದನ ತಾನ ತಂದನ ...
ಓ ಓ ಓ ಓ. . .
ಕನ್ನಡ ನಾಡಿನ ರತ್ನವೇ
ಕನ್ನಡ ಬಳಗದ ಬಂಧುವೇ
ಬಾ ನಿನ್ನಿಂದ ಬಾಳು ಉಲ್ಲಾಸ
ಬಾ ನಿನ್ನಿಂದ ಸೌಖ್ಯ ವಿಕಾಸ
ಓ ಓ ಓ ಓ. . .
ಕನ್ನಡ ನಾಡಿನ ರತ್ನವೇ
ಕನ್ನಡ ಬಳಗದ ಬಂಧುವೇ
ಕಲೆಗಳ ತವರೂರು ಕರುನಾಡು
ಅಭಿನವ ಕಲೆಗಾರ ನೀನು
ಗಂಧರ್ವ ಕಿಂಪುರುಷ
ನಿನ್ನಯ ಹಾಡೇಮಗೆ ಕೀರ್ತಿ
ಗುಣಗಳ ಹಿರಿಯೂರು ಕರುನಾಡು
ಸುಗುಣರ ಹರಿಕಾರ ನೀನು
ಸಾಧಕನೇ ... ಸ್ವಾರ್ಥಕನೇ ...
ನಿನ್ನಯ ಬಾಳೆಮಗೆ ಸ್ಫೂರ್ತಿ
ಬಾರಾ ಮನೆಮಗನೆ ಆರತಿ ನಿನಗೆ
ಕರುನಾಡಿನ ಭಾಗ್ಯ ಕರುನಾಡಿನ ಪುಣ್ಯ
ಓ ಓ ಓ ಓ. . .
ಕನ್ನಡ ನಾಡಿನ ರತ್ನವೇ
ಕನ್ನಡ ಬಳಗದ ಬಂಧುವೇ
ಬಾ ನಿನ್ನಿಂದ ಬಾಳು ಉಲ್ಲಾಸ
ಬಾ ನಿನ್ನಿಂದ ಸೌಖ್ಯ ವಿಕಾಸ
ಓ ಓ ಓ ಓ. . .
ಕನ್ನಡ ನಾಡಿನ ರತ್ನವೇ
ಕನ್ನಡ ಬಳಗದ ಬಂಧುವೇ
ಗಂಧದ ಮಲೆನಾಡು ಕರುನಾಡು
ಹೆಸರಲಿ ಹಸಿರಾದೇ ನೀನು
ಧೀರತನ…. ಜಾಣತನ….
ನಿನ್ನಯ ಕೊರಳಲ್ಲಿರೋ ಹಾರ
ವೀರರ ಗಡಿನಾಡು ಕರುನಾಡು
ನುಡಿಗೆ ನಾಯಕ ನೀನು
ಅಭಿಮಾನ ಅಭಿದಾನ
ನಿನ್ನಯ ಎದೆಯಲ್ಲಿರೋ ಸಾರ
ಬಾರಾ ಕುಲಮಗನೆ ವಂದನೆ ನಿನಗೆ
ಕರುನಾಡಿನ ಭಾಗ್ಯ ಕರುನಾಡಿನ ಪುಣ್ಯ
ಓ ಓ ಓ ಓ. . .
ಕನ್ನಡ ನಾಡಿನ ರತ್ನವೇ
ಕನ್ನಡ ಬಳಗದ ಬಂಧುವೇ
ಬಾ ನಿನ್ನಿಂದ ಬಾಳು ಉಲ್ಲಾಸ
ಬಾ ನಿನ್ನಿಂದ ಸೌಖ್ಯ ವಿಕಾಸ
ಓ ಓ ಓ ಓ. . .
ಕನ್ನಡ ನಾಡಿನ ರತ್ನವೇ
ಕನ್ನಡ ಬಳಗದ ಬಂಧುವೇ