S1:ನೀ ತಂದ ಕಾಣಿಕೆ ನಗೆಹೂವ ಮಾಲಿಕೆ..
ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ ಅನುರಾಗ ಮಾಲಿಕೆ..
ಅದಕಿಲ್ಲ ಹೋಲಿಕೆ
S2:ಉಂ ಉಂಹೂಂ...
S2:ನೀ ತಂದ ಕಾಣಿಕೆ ನಗೆಹೂವ ಮಾಲಿಕೆ..
ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ ಅನುರಾಗ ಮಾಲಿಕೆ..
ಅದಕಿಲ್ಲ ಹೋಲಿಕೆ
S1:ಕಣ್ಣಲ್ಲೆ ಬರೆದೆ ಒಲವಿನ ಪೀಠಿಕೆ
ಪೂರೈಸ ಬಂದೇ ಮನಸಿನ ಬೇಡಿಕೆ
ಕಣ್ಣಲ್ಲೆ ಬರೆದೆ ಒಲವಿನ ಪೀಠಿಕೆ
ಪೂರೈಸ ಬಂದೇ ಮನಸಿನ ಬೇಡಿಕೆ
S2:ಮೈಮರೆತು ನಿಂತೇ ಆ ನಿನ್ನ ನೋಟಕೆ
ಮೈಮರೆತು ನಿಂತೇ ಆ ನಿನ್ನ ನೋಟಕೆ
ನಾ ಹಾಡಿ ಕುಣಿದೇ ನಿನ್ನೆದೆ ತಾಳಕೆ
ಆ ಆ ಆ ಆಹಾ ಹಾ.....ಆಆ
S1:ನೀ ತಂದ ಕಾಣಿಕೆ ನಗೆಹೂವ ಮಾಲಿಕೆ..
ನಗೆ ಹೂವ ಮಾಲಿಕೆ
S2:ನಾ ತಂದ ಕಾಣಿಕೆ ಅನುರಾಗ ಮಾಲಿಕೆ..
ಅದಕಿಲ್ಲ ಹೋಲಿಕೆ
S1:ಕರೆದೇ ನನ್ನಾ ಕನಸಿನ ತೀರಕೆ
ಆಸೆಯ ಹೂಗಳು ಅರಳಿಹ ತೋಟಕೆ
ಕರೆದೇ ನನ್ನಾ ಕನಸಿನ ತೀರಕೆ
ಆಸೆಯ ಹೂಗಳು ಅರಳಿಹ ತೋಟಕೆ
S2:ಈ ಬಾಳ ಗುಡಿಗೇ ನೀನಾದೆ ದೀಪಿಕೆ
ಈ ಬಾಳ ಗುಡಿಗೇ ನೀನಾದೆ ದೀಪಿಕೆ
ಬೆಳಕಾಗಿ ನಿಂದೇ ನೀ ಎನ್ನ ಜೀವಕೆ
ಆ ಆ ಆ ಆಹಾ ಹಾ.....ಆಆ
S1:ನೀ ತಂದ ಕಾಣಿಕೆ ನಗೆಹೂವ ಮಾಲಿಕೆ..
ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ ಅನುರಾಗ ಮಾಲಿಕೆ..
ಅದಕಿಲ್ಲ ಹೋಲಿಕೆ