ಮುತ್ತೆ ಮಣಿಯೆ 
ಹೊನ್ನ ಗಿಣಿಯೇ 
ನಿನ್ನ ಅಂದ ಚಂದ ಕಂಡು 
ನಾ ಸೋತೆನು 
ಇಂದೇ ನಿನಗೆ 
ನನ್ನೇ ಕೊಡಲು 
ಓಡೋಡಿ ನಾ ಬಂದೆನು....ಉ ಉ ಉಉ 
ನಿನ್ನ ಗುಣಕೆ 
ಹೊನ್ನ ನುಡಿಗೆ 
ನನ್ನ ಮುದ್ದು ನಲ್ಲ ಅಂದೇ 
ಬೆರಗಾದೆನು 
ಚೆನ್ನ ದಿನವೂ 
ನಿನ್ನ ಬಳಿಯೇ 
ಇರಲೆಂದು ನಾ ಬಂದೆನು....ಉ ಉ ಉಉ 
ಮುತ್ತೆ ಮಣಿಯೆ 
ಹೊನ್ನ ಗಿಣಿಯೇ 
 ನಿನ್ನ ಚೆಲುವನು ನೋಡಿ ಸುಮಗಳು 
ನಾಚಿ ಮೊಗ್ಗಾಗಿದೆ... 
 (ನಗು) ಆಹ್ಹಹ್ಹಹ್ಹ 
ನಿನ್ನ ನಗೆಯನು ಕಂಡ ಕಂಗಳು 
ಹಿಗ್ಗಿ ಹೂವಾಗಿದೆ 
 ನಿನ್ನ ಒಲವಿಗೆ ನನ್ನ ಹೃದಯವು 
ಸೋತು ಶರಣಾಗಿದೆ... 
ಎಂದು ಜೊತೆಯಲಿ ಹೀಗೆ ನಲಿಯುವ 
ಆಸೆ ನನಗಾಗಿದೆ 
ನಲ್ಲೆ ಮಾತೆಲ್ಲಾ ಜೇನಂತೆ ಸಿಹಿಯಾಗಿದೆ 
ಆ....ಆಆಆ.... 
ನಲ್ಲ ಈ ಸ್ನೇಹ ನನಗಿಂದು ಹಿತವಾಗಿದೆ 
 ನಮ್ಮ ಒಲವು 
ತಂದ ನಲಿವು 
ಹೊಸ ಬಾಳನು ತಂದಿದೆ....ಏ ಏ ಏ ಏ 
ನಿನ್ನ ಗುಣಕೆ 
ಹೊನ್ನ ನುಡಿಗೆ 
  ನನ್ನ ಹೃದಯದ ವೀಣೆ ಮೀಟಿದೆ 
ನಿನ್ನ ಕಣ್ಣೋಟದಿ 
ಚೆನ್ನ ನನ್ನಲಿ ಬಯಕೆ ತುಂಬಿದೆ 
(ನಗುತ್ತ) ನಿನ್ನ ತುಂಟಾಟದಿ 
ನೆನ್ನೆ ಇರುಳಲಿ ಕಂಡ ಸ್ವಪ್ನವು 
ಇಂದು ನಿಜವಾಗಿದೆ... 
 ಆ ಹ 
ಚಿನ್ನ ನಿನ್ನನು ಸೇರಿ ಈ ದಿನ 
ಬಾಳು ಸೊಗಸಾಗಿದೆ 
ಇನ್ನೂ ಮಾತೇಕೆ ತೋಳಿಂದ 
ಬಳಸೆನ್ನನು 
ಆ....ಆಆ.. ಆಆ ಆ.... 
 ನಲ್ಲೆ ಕೊಡಲೇನು ಸವಿಯಾದ 
ಮುತ್ತೊಂದನೂ 
ಇನ್ನು ಏಕೆ 
ಮಾತಿನಲ್ಲೇ 
ನೀ ಕಾಲವ ಕಳೆಯುವೆ.. ಏ ಏ ಏ ಏ 
ಮುತ್ತೆ ಮಣಿಯೆ 
ಲಾಲಾ...ಲಾಲಾ 
 ಹೊನ್ನ ಗಿಣಿಯೇ.. 
(ನಗುತ್ತ) ಲಾಲಾ...ಲಾಲಾ 
 ನಿನ್ನ ಅಂದ ಚಂದ ಕಂಡು 
ನಾ ಸೋತೆನು 
 ಚೆನ್ನ ದಿನವೂ 
 ಲಾಲಾ... ಲಲಲ 
ನಿನ್ನ ಬಳಿಯೇ 
 (ನಗುತ್ತ) ಲಾಲಾ... ಲಲಲ 
 ಇರಲೆಂದು ನಾ ಬಂದೆನು.. ಉ ಉ ಉ ಉ