ಒಂದು ಮಳೆಬಿಲ್ಲು
ಒಂದು ಮಳೆಮೋಡ
ಹೇಗೋ ಜೊತೆಯಾಗಿ
ತುಂಬ ಸೊಗಸಾಗಿ
ಏನನೋ.. ಮಾತಾಡಿವೇ
ಭಾವನೆ ಬಾಕಿ ಇದೆ
ತೇಲಿ ನೂರಾರು ಮೈಲಿಯು
ಸೇರಲು ಸನಿಸನಿಹ
ಮೋಡಸಾಗಿ ಬಂದಿದೆ ಪ್ರೀತಿಗೆ
ಮುದ್ದಾಗಿ ಸೇರಿವೆ ಎರಡು ಸಹಾ....
ಏನನೋ ಮಾತಾಡಿವೆ
ಭಾವನೆ ಬಾಕಿ ಇವೆ
ಒಂದು ಮಳೆಬಿಲ್ಲು
ಒಂದು ಮಳೆಮೋಡ
ಹೇಗೋ ಜೊತೆಯಾಗಿ
ತುಂಬ ಸೊಗಸಾಗಿ….
ಸನ್ನೆಗಳಿಗೆ ಸೋತ ಕಣ್ಣುಗಳಿವೆ
ಕದ್ದು ಕೊಡುವುದಕೆ ಕಾದ ಮುತ್ತುಗಳಿವೆ…
ಬೆರಳುಗಳು ಸ್ಪರ್ಷ ಬಯಸುತಿವೆ
ಮನದ ಒಳಗೊಳಗೆ ಎಷ್ಟೊ ಆಸೆಗಳಿವೆ
ಎಂತ ಆವೇಗ ಈ ತವಕ
ಸೇರೊ ಸಲುವಾಗಿ ಎಲ್ಲ ಅತಿಯಾಗಿ
ಎಲ್ಲೂ ನೋಡಿಲ್ಲ ಈ ತನಕ…
ಪ್ರೀತಿಗೆ ಒಂದ್ ಹೆಜ್ಜೆ ಮುಂದಾಗಿವೆ
ಏನನೋ ಮಾತಾಡಿವೆ...
ಯಾ..ತಕೆ ಹೀಗಾಗಿವೇ
ಒಂದು ಮಳೆಬಿಲ್ಲು
ಒಂದು ಮಳೆಮೋಡ
ನಾಚುತಲಿವೆ ಯಾಕೊ ಕೈಯ ಬಳೆ
ಮಂಚ ನೋಡುತಿದೆ ಬೀಳೊ ಬೆವರ ಮಳೆ
ಬೆಚ್ಚಗೆ ಇದೆ ನೆಟ್ಟ ಉಸಿರ ಬೆಳೆ
ದೀಪ ಮಲಗುತಿದೆ ನೋಡಿ ಈ.. ರಗಳೆ
ತುಂಬಾ ಹೊಸದಾದ ಈ ಕಥನ...
ಒಮ್ಮೆ ನಿಷ್ಯಭ್ದ ಒಮ್ಮೆ ಸಿಹಿಯುದ್ದ
ಎಲ್ಲೂ ಕೇಳಿಲ್ಲ ಈ ಮಿಥುನ..
ಪ್ರೀತಿಲಿ ಈ ಜೀವ ಒಂದಾಗಿವೆ
ಏನನೋ... ಹೂ...
ಮಾತಲೆ ಮುದ್ದಾಡಿವೆ
ಒಂದು ಮಳೆಬಿಲ್ಲು
ಒಂದು ಮಳೆಮೋಡ
ಹೇಗೋ ಜೊತೆಯಾ..ಗಿ
ತುಂಬ ಸೊಗಸಾಗಿ
ಏನನೋ ಮಾತಾಡಿವೇ
ಭಾವನೆ ಬಾಕಿ ಇದೆ