menu-iconlogo
logo

Bandanthe Rajakumara [ಭರಾಟೆ]

logo
avatar
Trisha Krishnanlogo
..----ƦɨនϦɨ----..logo
Canta en la App
Letras
----RISHI----

[F]•ಬಂದಂತೆ ರಾಜಕುಮಾರ

ಇಳಿಸೋಕೆ ನನ್ನೆದೆಯ ಭಾರ

ಇವನಂದ್ರೆ ಪ್ರೀತಿ ಅಪಾರ...

ಇರಲಾಗದು ಬಿಟ್ಟು ದೂರ

ಹೃದಯದ ಜೋಪಡಿಗೆ

ಭರವಸೆಯ ದೀಪವನು

ಹಚ್ಚಿಟ್ಟು ಮುತ್ತಿಟ್ಟ

ಪ್ರೀತಿಯ ರಾಜಕುಮಾರ....

[M]•ನನಗಾಗಿ ನೀನು

ಹುಟ್ಟಿರುವೆ ಏನು??

ಕೊನೆತನಕ ಜೊತೆಯಲ್ಲೇ

ಇರಬಹುದೆ ನಾನು..

ಈ ಜೀವ ನೀನು

ಆಶ್ಚರ್ಯವೇನೂ

ಏಳೇಳು ಜನುಮಕ್ಕು

ಜೊತೆಗಿರುವೆ ನಾನೂ....

[F]•ಬಂದಂತೆ ರಾಜಕುಮಾರ

ಇಳಿಸೋಕೆ ನನ್ನೆದೆಯ ಭಾ..ರ

🎼🔸---RISHI---🔸🎼

[F]•ಮೇರು ಪರ್ವತದ ಅರಸ

ನನ್ನ ಕಾಯುವನು ದಿವಸ

ಕೊಹಿನೂರು ವಜ್ರದ ಮನುಷನಿವನು

ಹ್ಹಾ...ಹ್ಹಾ....ಹ..

ನೋಡಿ ಒಂದೇ ಸಮನೇ..

ಹೃದಯ ಸೋತಿಹುದು ಶಾನೆ

ಇವನ ಕಣ್ಣೆ ಜಾದು ಗಂಧರ್ವನು

ನನಗಾಗಿ ನೂರು

ಸಮರವನು ಎದುರಿಸಿ

ಸೋಲನ್ನೆ ಕಾಣದ

ಪ್ರೀತಿಯ ರಾಜಕುಮಾ...ರ

[M]•ಪಲ್ಲಕ್ಕಿಯಲ್ಲೆ

ಮೆರೆಸುವೆನು ನಿನ್ನ

ಕೊನೆತನಕ ಜೋಪಾನ

ಮಾಡುವೆನು ನಾನು..

ಈ ಜೀವ ನೀನು

ಆಶ್ಚರ್ಯವೇನೂ

ಏಳೇಳು ಜನುಮಕ್ಕು

ಜೊತೆ ಬರುವೆ ನಾನೂ........

🎼🔸---RISHI---🔸🎼

[F]•ತಲೆಯ ಬಾಗದ ಸೂರ್ಯ..

ತನಗೆ ಇವನೇ ಧೈರ್ಯ..

ನೋಟದಲೆ ನೂರಾನೆ

ಪಳಗಿಸುವ ಶೌರ್ಯ...

ಹ್ಹಾ ಮಿಂಚು ಚದುರಿಸೋ ಕೋಪ..

ಉಲ್ಕೆ ತಡೆಯುವ ಭೂಪ..

ಜಗವನ್ನೇ ನಗುವಿನಲಿ

ಜಯಿಸುವ ಸ್ಥೈರ್ಯ

ಸ್ವಾರ್ಥವೇ ಇರದ

ಪ್ರೀತಿಗೆ ಮಣಿಯುವ

ಅಭಿಮಾನ ಗಳಿಸುವ

ಪ್ರೀತಿಯ ರಾಜಕುಮಾರ...

[M]•ಮುತ್ತುಗಳ ಸುರಿದು

ಮಾಲೆಯನು ಹೊಸೆದು

ಉಡುಗೊರೆಯ ನಿನಗೆ

ದಿನ ಕೊಡುವೆ ನಾನು...

ಈ ಜೀವ ನೀನು

ಆಶ್ಚರ್ಯವೇನೂ

ಏಳೇಳು ಜನುಮಕ್ಕು

ಜೊತೆಗಿರುವೆ ನಾನು......

----RISHI----

Bandanthe Rajakumara [ಭರಾಟೆ] de Trisha Krishnan - Letras y Covers