----RISHI----
---✨😍😍😍✨---
F-ಮೊದಲ ಮಳೆಯಂತೆ
ಎದೆಗೆ..ಇಳಿದೆ ಮೆಲ್ಲಗೆ..
M-ಮೊದಲ ಕನಸಂತೆ
ಒಲವೇ.. ಒಲಿದೆ ಒಮ್ಮೆಗೆ..
ದಡ ನೀನಾಗು ಸದಾಕಾಲ
ಅಲೆಯಂತಾಗಿ ನಾ ಸೋಕುವೆ
F-ಬಲೆ ನೀನಾಗು ಅಪಾಯಾನೆ..
ಇರದಂತೆ ನಾ ಬೀಳುವೆ..
M-ಸುಮ್ಮನೆ ಯಾಕೆ ಬಂದೆ..
ಮಿಂಚಂತೆ ನನ್ನ ಮುಂದೆ
ನಿನ್ನನು ನೋಡಿದಂದೆ
ನಾ ಬಿದ್ದೆ ನಿನ್ನ ಹಿಂದೆ
F-ನೀನೆ ಮೊದಲು..ನೀನೆ ಕೊನೆ..
ಬೇರೆ ಯಾರೂ..ಬೇಡ ನನಗೆ..
ಉಸಿರು ಇರುವ ಕೊನೆಯವರೆಗೂ..
ಇರಲೇಬೇಕು...ನನ್ನ ಜೊತೆಗೆ..
M-ಚಾಚಿದಾ ಕೈಗೆ ಆಕಾಶವೇ ತಾಗಿದೆ
ಗೀಚಿದ ಹಾಗೆ ಮಳೆಬಿಲ್ಲೆ ಮೈಗಂಟಿದೆ
F-ಹೊಸ ಸಂವತ್ಸರ..ಹೊಸ ಮನ್ವಂತರ
ಶುರುವಾಗಿದೆ ಆಗಿದೆ ಈಗ..
M-ಬೊಂಬೆಗೆ ಜೀವ ತಂದು
ಆ ಬ್ರಹ್ಮನು ನನಗೆಂದೂ
ಭೂಮಿಗೆ ತಂದನೂ..
ನಿನ್ನನ್ನು ಇಂದು...
F-ಜನಿಸುವೆ ಜನಿಸುವೇ
ಪುನ ಪುನಹ
ಜೊತೆಯಲಿ ಬದುಕಲು
ಇದೆ ತರಹ
M-ನಗ್ ನಗ್ತಾ ನನ್ನ ಮನಸ
ಎತ್ಕೊಂಡು ಹೊಯ್ತವ್ಳಲ್ಲೋ..
ಆಯ್ಯಯ್ಯಯ್ಯೋ....
ನಗ್ತವ್ಳೋ...
ಆಯ್ಯಯ್ಯಯ್ಯೋ....
ನಗ್ತವ್ಳೋ...
----RISHI----