menu-iconlogo
logo

Chinnada Mallige Hoove

logo
Paroles
ಹುಲಿಯ ಹಾಲಿನ ಮೇವು

ಸಂಗೀತ: ಜಿ.ಕೆ.ವೆಂಕಟೇಶ್

ಸಾಹಿತ್ಯ: ಚಿ.ಉದಯಶಂಕರ

ಹಾಡಿರುವವರು: ಡಾ ರಾಜ್ ಕುಮಾರ್, ಎಸ್.ಜಾನಕಿ

ಅಪ್ಲೋಡ್: ರವಿ ಎಸ್ ಜೋಗ್

ಸುಜಾತ ರವರ ಸಹಾಯದೊಂದಿಗೆ...

ಚಿನ್ನದ ಮಲ್ಲಿಗೆ ಹೂವೆ

ಬಿಡು ನೀ ಬಿಂಕವ ಚೆಲುವೆ

ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ

ಛಲವು ನನ್ನಲ್ಲಿ ಏಕೆ.. ಓ ಓ ಓ..

ಚಿನ್ನದ ಮಲ್ಲಿಗೆ ಹೂವೆ

ಬಿಡು ನೀ ಬಿಂಕವ ಚೆಲುವೆ

ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ

ಛಲವು ನನ್ನಲ್ಲಿ ಏಕೆ.. ಓ ಓ ಓ..

ಚಿನ್ನದ ಮಲ್ಲಿಗೆ ಹೂವೆ

ಬಿಡು ನೀ ಬಿಂಕವ ಚೆಲುವೆ

ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ...

ಲಾ ಲಾ ಲಾ ಆಹಾ ಹಾ ಹಾ ಹಾ ಹಾ ಹಾ

ಲಾ ಲಾ ಲಾ

ಊಹ್ಯಮ್..........

ಮಾತಲ್ಲೆ ಜೇನು ತುಂಬಿ

ನೂರೆಂಟು ಹೇಳುವೆ..

ನನಗಿಂತ ಚೆಲುವೆ ಬರಲು

ನೀ ಹಿಂದೆ ಓಡುವೆ...

ನಿನ್ನನ್ನು ಕಂಡ ಕಣ್ಣು

ಬೇರೇನು ನೋಡದಿನ್ನು

ನಿನ್ನನ್ನು ಕಂಡ ಕಣ್ಣು.....

ಹಾಂ.....

ಬೇರೇನು ನೋಡದಿನ್ನು

ನಿನಗಾಗಿಯೆ ಬಾಳುವೆ ಇನ್ನು ನಾನು....

ಹೊನ್ನಿನ ದುಂಬಿಯೆ ಇನ್ನು

ನಿನ್ನ ನಂಬೆನು ನಾನು

ನನ್ನ ನೆನಪು ಬಂದಾಗ ಮೊಗವ ಕಂಡಾಗ

ಒಲವು ಬೇಕೆಂದು ಬರುವೆ......

ಹೊನ್ನಿನ ದುಂಬಿಯೆ ಇನ್ನು

ನಿನ್ನ...ನಂಬೆನು ನಾನು

ಉೂಂ ಹ್ಮಂ

ಆ ಸೂರ್ಯ ಚಂದ್ರ ಸಾಕ್ಷಿ

ತಂಗಾಳಿ ಸಾಕ್ಷಿಯು...

ಎಂದೆಂದು ಬಿಡದಾ... ಬೆಸುಗೆ

ಈ ನಮ್ಮ ಪ್ರೀತಿಯು...

ಬಂಗಾರದಂಥ ನುಡಿಯ

ಸಂಗಾತಿಯಲ್ಲಿ ನುಡಿದು

ಬಂಗಾರದಂಥ ನುಡಿಯ

ಸಂಗಾತಿಯಲ್ಲಿ ನುಡಿದು

ಆನಂದದಾ ಕಂಬನಿ ತಂದೆ ನೀನು.....

ಚಿನ್ನದ ಮಲ್ಲಿಗೆ ಹೂವೆ

ಬಿಡು ನೀ ಬಿಂಕವ ಚೆಲುವೆ

ಹ್ಞುಂಹ್ಞುಂ

ಹೊನ್ನಿನ ದುಂಬಿಯೆ ಇನ್ನು

ನಿನ್ನ ನಂಬೆನು ನಾನು

ನಿನ್ನ ಒಲವು ಬೇಕೆಂದು

ಬಳಿಗೆ ಬಂದಾಗ

ಛಲವು ನನ್ನಲ್ಲಿ ಏಕೆ ಓ ಓ ಓ

ಚಿನ್ನದ ಮಲ್ಲಿಗೆ ಹೂವೆ

ಬಿಡು ನೀ ಬಿಂಕವ ಚೆಲುವೆ..

ರವಿ ಎಸ್ ಜೋಗ್