menu-iconlogo
logo

Ee Mounava Thaalenu

logo
Paroles
ಈ.. ಮೌನವ.. ತಾಳೆನು..

ಈ ಮೌನವ ತಾಳೆನು

ಮಾತಾಡೆ ದಾರಿಯ ಕಾಣೆನು

ಓ ರಾಜ...

ಈ ಮೌನವ ತಾಳೆನು

ನೀ ಹೇಳದೆ ಬಲ್ಲೆನು

ನಿನ್ನಾಸೆ ಕಣ್ಣಲ್ಲೇ ಕಂಡೆನು

ಓ ರಾಣಿ...

ನೀ ಹೇಳದೆ ಬಲ್ಲೆನು

ಚಿತ್ರ

ಹಾಡಿದವರು

ಸಾಹಿತ್ಯ

ಸಂಗೀತ

ನಾನಂದು ನಿನ್ನ ಕಂಡಾಗ ಚಿನ್ನ

ಏನೇನೊ ಹೊಸ ಭಾವನೆ

ಹೂವಾಗಿ ಮನಸು ಏನೇನೊ ಕನಸು

ನಾ ಕಾಣದ ಕಲ್ಪನೆ

ನಾನಂದು ನಿನ್ನ ಕಂಡಾಗ ಚಿನ್ನ

ಏನೇನೊ ಹೊಸ ಭಾವನೆ

ಹೂವಾಗಿ ಮನಸು ಏನೇನೊ ಕನಸು

ನಾ ಕಾಣದ ಕಲ್ಪನೆ

ಇಂದು ನಿನ್ನ ಬಿಡೆನು

ಈ ದೂರ ಸಹಿಸೆನು

ನೀ ಹೇಳದೆ ಬಲ್ಲೆನು

ನಿನ್ನಾಸೆ ಕಣ್ಣಲ್ಲೇ ಕಂಡೆನು

ಓ ರಾಣಿ...

ನೀ ಹೇಳದೆ ಬಲ್ಲೆನು

ಈ ಅಂದ ಕಂಡು

ನಾ ಮೋಹಗೊಂಡು

ಮನ ಹಿಗ್ಗಿ ಹೂವಾಯಿತು...

ಬಾನಲ್ಲಿ ಮುಗಿಲು ಕಂಡಾಗ ನವಿಲು

ಕುಣಿವಂತೆ ನನಗಾಯಿತು...

ಈ ಅಂದ ಕಂಡು ನಾ ಮೋಹಗೊಂಡು

ಮನ ಹಿಗ್ಗಿ ಹೂವಾಯಿತು...

ಬಾನಲ್ಲಿ ಮುಗಿಲು ಕಂಡಾಗ ನವಿಲು

ಕುಣಿವಂತೆ ನನಗಾಯಿತು ...

ಅಂದೆ ನಿನಗೆ ಸೋತೆ

ನಾ ಜಗವನೆ ಮರೆತೆ...

ಈ ಮೌನವ ತಾಳೆನು

ಮಾತಾಡೆ ದಾರಿಯ ಕಾಣೆನು

ಓ ರಾಜ...

ನೀ ಹೇಳದೆ ಬಲ್ಲೆನು

ನಿನ್ನಾಸೆ ಕಣ್ಣಲ್ಲೇ ಕಂಡೆನು

ಓ ರಾಣಿ...

ಓ ರಾಜ..

ಓ ರಾಣಿ...

Ee Mounava Thaalenu par Dr.RajKumar/S. Janaki - Paroles et Couvertures