ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು
ನಗುತಾದ ಭೂತಾಯಿ ಮನಸು
ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು
ನಗುತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರೆಮನೆಯಾಗೇನೈತೆ ಸೊಗಸೂ
ಅರೆಮನೆಯಾಗೇನೈತೆ ಸೊಗಸು
ಮನೆತುಂಬ ಅರಿದೈತೆ ಕೆನೆ ಹಾಲು ಮೊಸರು
ಎದೆಯಾಗೆ ಬೆರೆತೈತೆ ಬ್ಯಾಸರದ ಉಸಿರು
ಗುಡಿಯಾಗೆ ಬೆಳಗೈತೆ ತುಪ್ಪಾದ ದೀಪ
ನುಡಿಯಾಗೆ ನಡೆಯಾಗೆ ಸಿಡಿದೈತೆ ಕ್ವಾಪ
ಸಿಡಿದೈತೆ ಕ್ವಾಪ
ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು
ನಗುತಾದ ಭೂತಾಯಿ ಮನಸು
ರಾಜಂಗು ರಾಣೀಗು ಮುರಿದೋದ್ರೆ ಮನಸು
ಅರೆಮನೆಯಾಗೇನೈತೆ ಸೊಗಸೂ
ಅರೆಮನೆಯಾಗೇನೈತೆ ಸೊಗಸೂ
ಬೆಳದಿಂಗಳು ಚೆಲ್ಲೈತೆ ಅಂಗಳದಾ ಒರಗೆ
ಕರಿಮೋಡ ಮುಸುಕೈತೆ ಮನಸಿನ ಒಳಗೆ
ಬಯಲಾಗೆ ತುಳುಕೈತೆ ಹರುಸದಾ ಒನಲೂ
ಪ್ರೀತಿಯಾ ತೇರಿಗೆ ಬಡಿದೈತೆ ಸಿಡಿಲೂ
ಬಡಿದೈತೆ ಸಿಡಿಲೂ
ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು
ನಗುತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರೆಮನೆಯಾಗೇನೈತೆ ಸೊಗಸೂ
ಅರೆಮನೆಯಾಗೇನೈತೆ ಸೊಗಸು