menu-iconlogo
logo

Bhoomi Thayaane

logo
Paroles
ಸಾಹಿತ್ಯ : ದೊಡ್ಡರಂಗೇಗೌಡ

ಸಂಗೀತ : ಉಪೇಂದ್ರಕುಮಾರ್

ಗಾಯನ : ಜಯಚಂದ್ರನ್ ಮತ್ತು ವಾಣಿ ಜಯರಾಮ್

ಅಪ್ಲೋಡ್: ರವಿ ಎಸ್ ಜೋಗ್

ಸುಜಾತ ರವರ ಸಹಾಯದೊಂದಿಗೆ...

ಭೂಮಿ ತಾಯಾಣೆ ನೀ ಇಷ್ಟ ಕಣೆ

ಭೂಮಿ ತಾಯಾಣೆ ನೀ ಇಷ್ಟ ಕಣೆ

ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ

ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ

ಹೇ ಚೂಟಿ.....ಹೇ ನಾಠಿ......

ಅಯ್ಯೋ ಮಂಕಣ್ಣ ನೀ ನನ್ನಾವನೇ

ಅಯ್ಯೋ ಮಂಕಣ್ಣ ನೀ ನನ್ನಾವನೇ

ಹಳ್ಳಿಮುಕ್ಕಾ ಎಂದೇ ಬೆನ್ನಾ ಹತ್ತಿದೆ

ಹಳ್ಳಿಮುಕ್ಕಾ ಎಂದೇ ಬೆನ್ನಾ ಹತ್ತಿದೆ

ನೀ ಚೂಟಿ......ನೀ ನಾಠಿ......

ಪೇಟೆ ಹೆಣ್ಣಾ ಬಣ್ಣ ಕಂಡೆ

ಕೊಂಚ ದಂಗಾಗಿ ನಾ ದೂರ ನಿಂತೆ

ತುಂಟಿ ನೀನು ಅಂಟಿಕೊಂಡೆ

ಪ್ರೀತಿ ನಂಟಾಗಿ ಸಲ್ಲಾಪ ತಂದೆ

ಕೊಂಕು ಮಾತು ನನ್ನ ಸೋಕಿ

ಮೋಹ ಮಿಂಚಾಗಿ ಮೈಯೆಲ್ಲ ಬೆಂಕಿ

ಮೋಡಿ ಮಾಡಿ ಕಾಡಿ ಬೇಡಿ

ಹೊಂದಿ ಈ ಸ್ನೇಹ ಹಣ್ಣಯ್ತು ಕೂಡಿ

ಭೂಮಿ ತಾಯಾಣೆ ನೀ ಇಷ್ಟ ಕಣೆ

ಅಯ್ಯೋ ಮಂಕಣ್ಣ ನೀ ನನ್ನಾವನೇ

ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ

ಹಾಂ ಹಂ ಹಳ್ಳಿಮುಕ್ಕಾ

ಎಂದೇ ಬೆನ್ನಾ ಹತ್ತಿದೆ

ಕಣ್ಣ ನೋಟ ಆಸೆ ಸಂತೆ

ನಿನ್ನ ಸಹವಾಸ ಹಾಲ್ಜೇನಿನಂತೆ

ನನ್ನ ನೀನು ನಿನ್ನ ನಾನು

ನಂಬಿ ಬೆರೆಯೋಣ ಹೂದುಂಬಿಯಂತೆ

ನಿನ್ನೆ ನಾಳೆ ಎಲ್ಲಾ ಮೀರಿ

ರಂಗು ರಂಗಾಗಿ ಬೆರೆಯೋಣ ಸೇರಿ

ಎಲ್ಲಿ ನೀನೋ ಅಲ್ಲಿ ನಾನು

ಎಂದೂ ಒಂದಾಗಿ ಸಾಗೋಣ ದಾರಿ

ಭೂಮಿ ತಾಯಾಣೆ ನೀ ಇಷ್ಟ ಕಣೆ

ಅಯ್ಯೋ ಮಂಕಣ್ಣ ನೀ ನನ್ನಾವನೇ

ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ

ಹಂ ಹಂ ಹಂ ಹಳ್ಳಿಮುಕ್ಕಾ

ಎಂದೇ ಬೆನ್ನಾ ಹತ್ತಿದೆ

ಹೇ ಚೂಟಿ.....

ಹೇ ನಾಠಿ......

ರವಿ ಎಸ್ ಜೋಗ್

Bhoomi Thayaane par Jayachandran/vanijayaram - Paroles et Couvertures