menu-iconlogo
logo

Aakasha Deepavu Neenu

logo
Paroles
ಆಕಾಶ ದೀಪವು ನೀನು

ನಿನ್ನ ಕಂಡಾಗ ಸಂತೋಷವೇನೂ

ಆಕಾಶ ದೀಪವು ನೀನು

ನಿನ್ನ ಕಂಡಾಗ ಸಂತೋಷವೇನೂ

ಆ ನೋಟದಲ್ಲಿ ಹಿತವೇನು

ಮರೆಯಾದಾಗ ನೋವೇನೂ

ಆಕಾಶ ದೀಪವು ನೀನು

ನಿನ್ನ ಕಂಡಾಗ ಸಂತೋಷವೇನೂ

ನಿನ್ನ ಕಂಡಾಗ ಸಂತೋಷವೇನೂ

ಕಂಡಂದೆ ಕುಣಿಯಿತು ಮನವು

ಹೂವಾಗಿ ಅರಳಿತು ತನುವು

ಕಂಡಂದೆ ಕುಣಿಯಿತು ಮನವು

ಹೂವಾಗಿ ಅರಳಿತು ತನುವು

ಹೃದಯದ ವೀಣೆಯನು

ಹಿತವಾಗಿ ನುಡಿಸುತಲೀ

ಆನಂದ ತುಂಬಲು ನೀನು...

ನಾ ನಲಿದೆನು...

ಆಕಾಶ ದೀಪವು ನೀನು

ನಿನ್ನ ಕಂಡಾಗ ಸಂತೋಷವೇನೂ

ನಿನ್ನ ಕಂಡಾಗ ಸಂತೋಷವೇನೂ

ಅನುರಾಗ ಮೂಡಿದ ಮೇಲೆ

ನೂರಾರು ಬಯಕೆಯ ಮಾಲೆ

ಅನುರಾಗ ಮೂಡಿದ.. ಮೇಲೆ

ನೂರಾರು ಬಯಕೆಯ ಮಾಲೆ

ಹೃದಯವೂ ಧರಿಸಿದೆ...

ಈ ಜೀವ ಸೋಲುತಿದೆ

ಸಂಗಾತಿ ಆದರೆ ನೀನು ನಾ ಉಳಿವೆನು

ಆಕಾಶ ದೀಪವು ನೀನು

ನಿನ್ನ ಕಂಡಾಗ ಸಂತೋಷವೇನೂ

ಆ ನೋಟದಲ್ಲಿ ಹಿತವೇನು

ಮರೆಯಾದಾಗ ನೋವೇನೂ

ಆಕಾಶ ದೀಪವು ನೀನು

ನಿನ್ನ ಕಂಡಾಗ ಸಂತೋಷವೇನೂ

ನಿನ್ನ ಕಂಡಾಗ ಸಂತೋಷವೇನೂ