menu-iconlogo
logo

Danger Danger

logo
Testi
ಚಿತ್ರ: ರಕ್ತ ಕಣ್ಣೀರು

ಸಾಹಿತ್ಯ: ಉಪೇಂದ್ರ

ಸಂಗೀತ: ಸಾಧು ಕೋಕಿಲ

ಗಾಯನ: ಹೇಮಂತ್ ಕುಮಾರ್

ಡೇಂಜರ್ 15 ಟು 20 ಡೇಂಜರ್

20 ಟು 30 ಸೋಲ್‍ಜರ್

30 ಟು 40 ಹಂಟರ್

40 ಗೆ ನೀ ಬೆಗ್ಗರ್

50 ಗೆ ಮೇಲ್ ಪಂಕ್ಚರ್

ಡೇಂಜರ್15 ಟು 20 ಡೇಂಜರ್

20 ಟು 30 ಸೋಲ್‍ಜರ್

30 ಟು 40 ಹಂಟರ್

40 ಗೆ ನೀ ಬೆಗ್ಗರ್

50 ಗೆ ಮೇಲ್ ಪಂಕ್ಚರ್

ಹದಿನಾರೊರುಷ ಕಳೆದ್‍ಹೋಗುವುದು

ಎಜುಕೇಷನ್ ಅನ್ನೋ ಜೈಲಿನಲಿ

ಇನ್ನೈದ್ ವರುಷ ಓಡೋಗುವುದೂ

ಪ್ರೀತಿಪ್ರೇಮದ ಗುಂಗಿನಲೀ

ಮತ್ತೈದ್ ವರುಷ ಕೈಜಾರುವುದೂ

ಕೆಲಸ ಹುಡುಕೋ ಗೋಳಿನಲಿ

ಇನ್ನುಳಿದೊ ವರುಷ ಸವೆದೋಗುವುದು

ಫ್ಯಾಮಿಲಿಯ ಜಂಜಾಟದಲೀ

ತಿರುಗೀ ನೋಡು ಹೋಗೋ ದಿನ,

ನಿನಗೆ ಉಳಿಯೋದ್ ಮೂರೇ ದಿನಾ

ಈ ಸತ್ಯ ನಿನಗೆ ತಿಳಿಯೊ ದಿನ

ನೀ ಕಟ್ಟುವೆ ಗಂಟು ಮೂಟೇನಾ..

ಹ ಹ... ಐ ಡೋಂಟ್ ಸೇ ನಾನ್‍ಸೆನ್ಸ್

ಡೇಂಜರ್ 15 ಟು 20 ಡೇಂಜರ್

20 ಟು 30 ಸೋಲ್‍ಜರ್

30 ಟು 40 ಹಂಟರ್

40 ಗೆ ನೀ ಬೆಗ್ಗರ್

50 ಗೆ ಮೇಲ್ ಪಂಕ್ಚರ್

ವೇದಾಂತಗಳು ಸಿದ್ಧಾಂತಗಳೂ

ಯಾರೊ ಬರೆದಿಟ್ಟ ಕಟ್ಟುಕಥೆ

ಜೀವನದ ರಸ ಸವಿಯೋಕೆ

ನಿಮಗೆ ನಾನೇನೆ ದಂತಕಥೆ

ಭೂಮಿಯಲಿ ನಾ ಹುಟ್ಟಿದ್ದೇ,

ಬೇಕು ಅನ್ನೋದು ಪಡೆಯೋಕೆ

ಮಧುಮಂಚದಲಿ ಸಿಹಿ ಜೊತೆಗೂಡಿ

ಕಹಿಯ ಸತ್ಯಾನ ಹಡೆಯೋಕೆ

ನನ್ನ ಹುಟ್ಟು ಗುಣ ಅದೆ ಅಹಂಕಾರ

ಈ ಭೂಪನಿಗೆ ಅದೆ ಅಲಂಕಾರ

ಇದ ಹೇಳುವುದು ನನ್ನ ಅಧಿಕಾರ

ಅದ ಕೇಳುವುದು ನಿಮ್ಮ ಗ್ರಹಚಾರ

ಹ ಹ... ಐ ಡೋಂಟ್ ಕೇರ್‍..

ಡೇಂಜರ್ 15 ಟು 20 ಡೇಂಜರ್

20 ಟು 30 ಸೋಲ್‍ಜರ್

30 ಟು 40 ಹಂಟರ್

40 ಗೆ ನೀ ಬೆಗ್ಗರ್

50 ಗೆ ಮೇಲ್ ಪಂಕ್ಚರ್

Danger Danger di Hemanth - Testi e Cover