
Nambide Ninna Nagabharana
ನಂಬಿದೆ ನಿನ್ನ ನಾಗಾಭರಣ
ಕಾಯೋ ಕರುಣಾಮಯ ನನ್ನ
ನಂಬಿದೆ ನಿನ್ನ ನಾಗಾಭರಣ
ಕಾಯೋ ಕರುಣಾಮಯ ನನ್ನ
ನಿನ್ನೀ ನಾಮವು ಒಂದೇ
ನೀಗಿಸಬಲ್ಲದು ಬಾಧೆ
ತನುಮನ ಜೀವನ ಪಾವನವಯ್ಯ
ಶಂಭೋ ಎನ್ನಲು ಇಲ್ಲ ಭಯ
ಬಾಡದ ಹೂವಿನ ಮಾಲೆ
ಬಾಗಿತು ಪಾದದ ಮೇಲೆ
ಬಾಡದ ಹೂವಿನ ಮಾಲೆ
ಬಾಗಿತು ಪಾದದ ಮೇಲೆ
ಪ್ರೇಮಮಯ ನಿನಗೆ ಜಯ
ಪ್ರೇಮಮಯ ನಿನಗೆ ಜಯ
ನನ್ನ ಜೀವನ ನಿನ್ನಲಿ ತನ್ಮಯ
ಬಾಳಿನ ಹಾದಿಯ ಬೆಳಗಯ್ಯ
ನಂಬಿದೆ ನಿನ್ನ ನಾಗಾಭರಣ
ಕಾಯೋ ಕರುಣಾಮಯ ನನ್ನ
ಲೋಕವ ಕಾಯುವ ಸ್ವಾಮಿ
ಭಿಕ್ಷೆಯ ಬೇಡಿದ ಪ್ರೇಮಿ
ಲೋಕವ ಕಾಯುವ ಸ್ವಾಮಿ
ಭಿಕ್ಷೆಯ ಬೇಡಿದ ಪ್ರೇಮಿ
ಭಸ್ಮಮಯ ಬಿಲ್ವಪ್ರಿಯ
ಭಸ್ಮಮಯ ಬಿಲ್ವಪ್ರಿಯ
ನನ್ನೀ ದೇಹವೇ ನಿನ್ನಯ ಆಲಯ
ಸೇವಾ ಭಾಗ್ಯವ ನೀಡಯ್ಯ
ನಂಬಿದೆ ನಿನ್ನ ನಾಗಾಭರಣ
ಕಾಯೋ ಕರುಣಾಮಯ ನನ್ನ
Nambide Ninna Nagabharana di Manjula Gururaj - Testi e Cover