ಜನುಮದ ಜೋಡಿ ನೀನು
ಕನಕ ಕನಕ
ಹುಡುಗನ ಪ್ರಾಣ ನೀನು
ಕೊನೆಯ ತನಕ
ಸುವ್ವಿ ಸುವ್ವಾಲೆ ಬಾಲೆ
ಕುಸುಮ ಸಿರಿಗಂಧ ಮಾಲೆ
ಸುವ್ವಿ ಸುವ್ವಾಲೆ ಬಾಲೆ
ಕುಸುಮ ಸಿರಿಗಂಧ ಮಾಲೆ
ಮಾಲೆ ಮಾಲೆ ಮಾಲೆ ಮಾಲೆ
ಮಲ್ಲೆ ಹೂಮಾಲೆ
ಜನುಮದ ಜೋಡಿ ನೀನೆ
ಪ್ರಾಣ ಪದಕ
ಉಸಿರಾದೆ ನೀನು ನನ್ನ
ಕೊನೆಯ ತನಕ
ದೊರೆಯಂಗೆ ಬಂದೆ ನೀ
ಜನಜಾತ್ರೆ ನಡುವೆ
ಕಣ್ಣಲ್ಲೆ ತೊಡಿಸಿದೆ ನೀ..
ಮುತ್ತಿನ ಒಡವೆ
ಒಡವೆ ತೊಡದೇನೆಯೂ
ಚೆಲುವೇರ ಚೆಲುವೆ
ಎದೆ ತುಂಬಿಕೊಳ್ಳಲು..
ನಿನ್ನಾ ಪಡೆವೆ
ನಿನ್ನ ಪ್ರೀತಿ ಚಿಲುಮೆಯೆ ಎಂದೆಂದಿಗೂ
ಗೆಲುವ ತರುವ ವರವೆ
ಅದು ಯಾವ ಜನುಮದಲೊ ಆಗೈತೆ
ನನಗು ನಿನಗು ಮದುವೆ
ನಿನ್ನ ಜೋಡಿ ಮಾಡಿದ ಆ ದೇವಗೆ
ಕೈಯ್ಯ ಮುಗಿವೆ ಮುಗಿವೆ
ಜನುಮದ ಜೋಡಿ ನೀನು
ಕನಕ ಕನಕ
ಹುಡುಗನ ಪ್ರಾಣ ನೀನು
ಕೊನೆಯ ತನಕ
ಮೊದಲನೆಯ ನೋಟದಾಗೆ
ಸೆಳೆದೆ ನೀ ಮನಸ
ಶಿವರಾತ್ರಿ ತಂದೆ ನೀ..
ದಿವಸ ದಿವಸ
ನಂಗೂ ಹಂಗಾಗೈತೆ
ಕೇಳಯ್ಯ ಅರಸ
ಒಳಗೊಳಗೆ ಹಾಡೈತೆ
ಹೃದಯಾ ಸರಸ
ನೆಲ ಮುಗಿಲು ಸೇರಿದರು ಬೇರಾಗದು
ನಮ್ಮ ಬಾಳ ಕಳಸ
ಒಡಲಾಳ ಚಂದದಲಿ ಹೇಳೈತೆ
ಪ್ರೀತಿ ಕಥೆಯ ಸೊಗಸ
ನಮ್ಮ ಬದುಕ ಹರಕೆಯ ಪೂರೈಸಲು
ದಿನವು ಹರುಷ ಹರುಷ
ಜನುಮದ ಜೋಡಿ ನೀನೆ
ಪ್ರಾಣ ಪದಕ
ಉಸಿರಾದೆ ನೀನು ನನ್ನ
ಕೊನೆಯ ತನಕ
ಇದು ಯಾವ ದೈವ ಲೀಲೆ
ಮನಸಾಯ್ತು ನಿನ್ನ ಮೇಲೆ
ಇದು ಯಾವ ದೈವ ಲೀಲೆ
ಮನಸಾಯ್ತು ನಿನ್ನ ಮೇಲೆ
ಮೇಲೆ ಮೇಲೆ ಮೇಲೆ ಮೇಲೆ
ತೇಲಿ ಹೋದೆನಾ
ಹೋ..ಜನುಮದ ಜೋಡಿ ನೀನು
ಕನಕ ಕನಕ
ಹುಡುಗನ ಪ್ರಾಣ ನೀನು
ಕೊನೆಯ ತನಕ