ಮೊದಮೊದಲು ಭುವಿಗಿಳಿದ
ಮಳೆಹನಿಯೂ ನೀನೇನಾ
ಹೂ ಎದೆಯ ಚುಂಬಿಸಿದ
ಇಬ್ಬನಿಯೂ ನೀನೇನಾ
ಕಾಣದೆ, ನನ್ನ ಕನಸಲ್ಲಿ
ಬಾರದೆ, ನನ್ನ ಎದುರಲ್ಲಿ
ಇದ್ದೆಯೋ ಯಾ... ಊರಲ್ಲಿ
ನೀನವಿತು ಕುಳಿತು
ಅಲ್ಲ, ಮಳೆಹನಿಯಲ್ಲಾ
ನಾನು, ಇಂಗೋದಿಲ್ಲಾ
ಅಲ್ಲ, ಇಬ್ಬನಿಯಲ್ಲಾ
ನಾನು, ಆರೋದಿಲ್ಲಾ
ಬಲು ಸೀದಾ ಬಲು ಸಾದಾ
ಹುಡುಗ ಕಣೆ ಇವನು
ನಾನು ಬಾರದೆ, ನಿನ್ನ ಕನಸಲ್ಲಿ
ಕಾಣದೆ ನಿನ್ನ, ಎದುರಲ್ಲಿ
ಇದ್ದೆನು ನನ್ ಊರಲ್ಲಿ
ನನ್ನಷ್ಟಕ್ಕೆ ನಾ