ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಚಕ್ರವರ್ತಿ
ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ, ಪಿ. ಸುಶೀಲ
ಅಪ್ಲೋಡ್: ರವಿ ಎಸ್ ಜೋಗ್
ತಾಳೆ ಹೂವ ಎದೆಯಿಂದಾ,
ಜಾರಿ ಜಾರಿ ಹೊರಬಂದಾ.
ತಾಳೆ ಹೂವ ಎದೆಯಿಂದಾ,
ಜಾರಿ ಜಾರಿ ಹೊರಬಂದಾ
ನಾಗಿಣಿ ನಾನಾದಾಗ, ನಿನ್ನರಸಿ ಬಂದಾಗ,
ಕದ್ದೋಡುವೆಯೋ... ಮುದ್ದಾಡುವೆಯೋ...
ತಾಳೆ ಹೂವ ಪೊದೆಯಿಂದಾ,
ಜಾರಿ ಜಾರಿ ಹೊರಬಂದಾ.
ತಾಳೆ ಹೂವ ಪೊದೆಯಿಂದಾ,
ಜಾರಿ ಜಾರಿ ಹೊರಬಂದಾ.
ನಾಗಿಣಿ ನೀನಾದಾಗ, ನನ್ನರಿಸಿ
ಬಂದಾಗ,ಜೊತೆಯಾಗುವೆನೂ...ಮುದ್ದಾಡುವೆನೂ....
ತಾಳೆ ಹೂವ ಎದೆಯಿಂದಾ...
ಜಾರಿ ಜಾರಿ ಹೊರಬಂದಾ..
ಮಸಕು ಮಸಕು ಸಂಜೆಯಲಿ,
ಮಲ್ಲೆ ಮೊಗ್ಗ ದೀಪದಲ್ಲಿ,
ಚಿಕ್ಕಪುಟ್ಟ ಪೊದೆಯಲ್ಲಿ,
ಹಸಿರಹುಲ್ಲ ಮೆತ್ತೆಯಲಿ,
ವಿರಹದಲೀ... ದಾಹದಲೀ...
ಮೋಹದಲಿ ಹಾಡಿ, ಬಂದೆ ನಿನ್ನ ನೋಡಿ,
ಈ...ಹೆಡೆಯ ನಡೆಯಲಿ
ಹಾ...ಯಾಗಿ ಮಲಗಲು ನಾ...ಅಧರ
ಸುಧೆಯನು, ಹಿತವಾಗಿ ಹೀರಲು,
ಇನ್ನೂ..ಬೇಕೇ...ಇನ್ನೂ...ಬೇಕೇ...
ಎನ್ನುವೆ ನೀನಾ...ಗ ಸನಿಹಕೆ ಬಂದಾ..ಗ
ತಾಳೆ ಹೂವ ಎದೆಯಿಂದಾ,
ಜಾರಿ ಜಾರಿ ಹೊರಬಂದಾ
ತಾಳೆ ಹೂವ ಪೊದೆಯಿಂದಾ,
ಜಾರಿ ಜಾರಿ ಹೊರಬಂದಾ
ಪೂರ್ಣಚಂದ್ರ ಬಂದಾಗ,
ಹಾಲಿನಂತ ಬೆಳಕಾದಾಗ,
ಬೀಸಿ ಬೀಸಿ ತಂಗಾಳಿ,
ಸುಯ್ಯ್ ಎಂದು ಸದ್ದಾದಾಗ,
ಯವ್ವನದಾ....ಆಸೆಯಲೀ...
ಜೋತೆಯಾಗಿ ಹಾಡುವೆ
ಜೊತೆ ಸೇರಿ ಆಡುವೆ
ಈ...ಸುಖದ ಹಾಸಿಗೆ ಈ...ಮಧುರ
ಭಾಷೆಗೆ ಆ...ನಂದವಾಗಿದೆ
ಮತ್ತೇರಿ ಹೋಗಿದೆ,
ಇನ್ನೂ ಹೀಗೇ....ಇರುವಾ ಆಸೆ....
ಹೊಮ್ಮಿದೆ ಎದೆಯಲ್ಲೀ, ಸೇರೂ ನನ್ನ..ಲ್ಲಿ
ತಾಳೆ ಹೂವ ಪೊದೆಯಿಂದ,
ಜಾರಿ ಜಾರಿ ಹೊರಬಂದ.
ನಾಗಿಣಿ ನಾನಾದಾಗ,
ನಿನ್ನರಸಿ ಬಂದಾಗ
ಜೊತೆಯಾಗುವೆನೂ..ಮುದ್ದಾಡುವೆನೂ..
ತಾಳೆ ಹೂವ ಎದೆಯಿಂದ,
ಜಾರಿ ಜಾರಿ ಹೊರಬಂದ.
ರವಿ ಎಸ್ ಜೋಗ್