ಹೊಯ್ ಚಿನ್ನ ಚಿನ್ನ
(ಹ್ಹಾ )
ಬೇಡ ಚಿನ್ನ
(ಹ್ಹಾ )
ಯಾಕೆ ಹೀಗೆ
(ಹ್ಹೂಂ )
ಕಾಡ್ತಿ ನನ್ನ
(ಆಹಾ)
ಹೃದಯವಿದು ಕರಗದು ಈ ಗೋಳಿನಲಿ
ನೆಂಟತನ ಕೇಳದಿರು ನನ್ನ ಬಳಿ
ಕೂಲಿ ಕೊಟ್ಟು ತಾಳಿ ಕಟ್ಟು
ಅನ್ನೋ ಹೆಣ್ಣು ನೀನೇನೇ
ಆಸೆ ಪಟ್ಟು ನೀತಿ ಕೆಟ್ಟು ನೊಂದ ಗಂಡು ನಾನೇನು
ಬೇಡ ಬೇಡ
(ಹ್ಹಾ)
ಹಾಗನ್ಬೇಡ
(ಹೊಯ್)
ನಾನೇ ಹೆಂಡತಿ
(ಹ್ಹಹ್ಹ)
ನೀನೇ ಗಂಡ
(ಹ್ಹ)
ಓ ಗೆಳೆಯಾ ಈ ಹೃದಯ ಸೆಳೆದಿರುವೇ
ನಿನಗಾಗಿ ಹಗಲಿರುಳು ಜಪಿಸಿರುವೇ
ನೆಂಟತನ ಬೇಡವೆನ್ನೋ ,ತುಂಟತನ ನಿಂಗೇಕೆ
ಆಸೆ ಪಡೋ ಹೆಣ್ಣಾ ದೂಡೋ ಕಲ್ಲು ಮನ ಹೀಗೆಕೆ
ಬೇಡ ನಂಗೇ ಜೋಡಿ
ಕೈಗೇ ಹಾಕೋ ಬೇಡಿ.. ಅಹ್ಹಹ್ಹಹ್ಹಾ
ಬೇಡ ನಂಗೇ ಜೋಡಿ
ಕೈಗೇ ಹಾಕೋ ಬೇಡಿ.
ಸ್ವಚ್ಛಂದ ಹಾರುವ ಹಕ್ಕಿ ...
ನಾ ನಿನ್ನ ಕಾಟಕ್ಕೆ ಸಿಕ್ಕಿ... ಅಹ್ಹಹ್ಹ
ಆಗೋಲ್ಲ ನಿನ್ನಯ ಗಂಡ
ಈ ನಿನ್ನ ಯತ್ನವು ದಂಡ
ಸಂಗಾತಿ ನಾ ನಿನ್ನಾ ಬಾಳಿಗೆ
(ಅಹ್ಹಹ್ಹ)
ನಾ ಕಾದಿಹ ಇದೋ ತಾಳಿಗೇ
ಮೀಸೆ ಹೊತ್ತ ಗಂಡೇ ನಿಂಗೆ ಆಸೆ ಇಲ್ಲವೇ
ಹೇ ಚಿನ್ನ ಚಿನ್ನ
(ಹ್ಹಾ )
ಬೇಡ ಚಿನ್ನ
(ಹ್ಹಾ )
ಯಾಕೆ ಹೀಗೆ
(ಹ್ಹೂಂ )
ಕಾಡ್ತಿ ನನ್ನ
(ಆಹಾ)
ಬೇಡ ಬೇಡ
(ಹೊಯ್)
ಹಾಗನ್ಬೇಡ
(ಹ್ಹಾ )
ನಾನೇ ಹೆಂಡತಿ
(ಹ್ಹಹ್ಹ)
ನೀನೇ ಗಂಡ
(ಹ್ಹಹೊಯ್ )
ಬ್ರಹ್ಮ ಎಂದೋ ನನ್ನ ನಿನ್ನ
ಜೋಡಿ ಮಾಡಿ ಬಿಟ್ಟ ಚೆನ್ನ
ಈಗ ಬೇಡ ಎಂದರಾಯಿತೇ.. ಅಹ್ಹಹ್
ಗಂಟು ಬಿದ್ದೆಯಲ್ಲೇ
ನೀನು ಅಂಟು ಜಾಡ್ಯದಂತೆ
ಇನ್ನು ಮದುವೆ ಅಂದ್ರೆ ಸುಮ್ಮನಾಯಿತೇ .. ಹ್ಹ
ಏಕೇ ಇಂಥ ಕೋಪ ಹ್ಹಾ...
ಹೆಣ್ಣೇ ಮನೆಗೇ ದೀಪ
ಏಕೀ.... ಆಸೆ ನನ್ನಲ್ಲಿ...
ಗಂಡೇ... ಇಲ್ವೇ ಊರಲ್ಲಿ...
ಇದ್ರೇ ಮನಸು,
ಕಟ್ಟು ತಾಳಿ ಮಾತನಾಡದೇ
ಚಿನ್ನ ಚಿನ್ನ
(ಹ್ಹ)
ಆಯ್ತು ಇನ್ನಾ
(ಹ್ಹೂಂ)
ನೀನೇ ಹೆಂಡ್ತಿ
(ಅಹ್ಹಹ್ )
ನಾನೇ ಗಂಡ
(ಆಹ್ಹಾ)
ಓ ಗೆಳೆಯಾ ಈ ಹೃದಯ ಸೆಳೆದಿರುವೇ
(ಅಹ್ಹಹ್ಹ)
ನಿನಗಾಗಿ ಹಗಲಿರುಳು ಜಪಿಸಿರುವೇ
ಮಾತು ಕೊಟ್ಟು ತಾಳಿ
ಕಟ್ಟೋ ಮುಗ್ದ ಗಂಡು ನಾನಮ್ಮಾ
ಆಸೆ ಪಟ್ಟು ಹಿಡಿದು ಪಟ್ಟು
ಗೆದ್ದ ಹೆಣ್ಣು ನಾನಯ್ಯ
ಹ್ಹಾ...
(ಹ್ಹಾ)
ಒಹೋ
(ಹೇಹೇ)