ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ
ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ
ಬೆಳಗಲು ಮನೆಯನ್ನು ಸಿರಿದೇವಿಯೇ
ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ
ಕಾಲಲಿ ಕಿರುಗೆಜ್ಜೆ ಘಲುಘಲು ಎಂದಾಗ
ಕಾಲಲಿ ಕಿರುಗೆಜ್ಜೆ ಘಲುಘಲು ಎಂದಾಗ
ಮನೆಯಲಿ ನೂರು ವೀಣೆ
ನಾದ ಹೊಮ್ಮಿ ಚಿಮ್ಮಲೀ
ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ
ಬೆಳಗಲು ಮನೆಯನ್ನು ಸಿರಿದೇವಿಯೇ
ಅನುಗಾಲ ಜೊತೆಯಾಗಿ
ನಮ್ಮ ಹರಿಯನ್ನು ಸೇರಲು ಬಾರಮ್ಮ
ಅನುಗಾಲ ಜೊತೆಯಾಗಿ
ನಮ್ಮ ಹರಿಯನ್ನು ಸೇರಲು ಬಾರಮ್ಮ
ನಮ್ಮ ಸೊಸೆಯಾಗಿ ನರಹರಿ ಸತಿಯಾಗಿ
ನಮ್ಮ ಸೊಸೆಯಾಗಿ ನರಹರಿ ಸತಿಯಾಗಿ,
ನಮಗಾನಂದ ನೀಡುತಲೀ...
ನಮಗಾನಂದ ನೀಡುತಲೀ...
ಸುಖವನು ನೀ ತಾರೆ ನಮ್ಮ ಭಾಗ್ಯದೇವತೇ
ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ
ಬೆಳಗಲು ಮನೆಯನ್ನು ಸಿರಿದೇವಿಯೇ
ಹಿತವಾದ ಶ್ರುತಿಯಲ್ಲಿ
ನಮ್ಮ ಬದುಕೆಂಬ ಗೀತೆಯ ಹಾಡಮ್ಮಾ
ಹಿತವಾದ ಶ್ರುತಿಯಲ್ಲಿ
ನಮ್ಮ ಬದುಕೆಂಬ ಗೀತೆಯ ಹಾಡಮ್ಮಾ
ಪ್ರೀತಿ ಸುಮವಾಗಿ ಜೇನಿನ ಹನಿಯಾಗಿ
ಪ್ರೀತಿ ಸುಮವಾಗಿ ಜೇನಿನ ಹನಿಯಾಗಿ,
ಹೊಸಸಂತೋಷ ತುಂಬುತಲೀ..
ಹೊಸಸಂತೋಷ ತುಂಬುತಲೀ...
ಕೀರ್ತಿಯ ತಾರಮ್ಮ ನಮ್ಮ ಭಾಗ್ಯದೇವತೇ
ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ
ಬೆಳಗಲು ಮನೆಯನ್ನು ಸಿರಿದೇವಿಯೇ
ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ
ಬೆಳಗಲು ಮನೆಯನ್ನು ಸಿರಿದೇವಿಯೇ
ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ
ಬೆಳಗಲು ಮನೆಯನ್ನು ಸಿರಿದೇವಿಯ
ಆ ಆ ಆ ಆ ಆ