* * * *
ಜಯಜಯ ಮಹಾದೇವಾ ಶಂಭೋ ಶಿವಶಂಕರಾ
ದೀನಜನ ಮಂದಾರ ಜ್ಞಾನವನ ಸಂಚಾರ....
ಭಕ್ತವತ್ಸಲಾ ಬಾರಾ ನಿತ್ಯನಿರ್ಮಲ ತೋರಾ ನಿನ್ನ ರೂಪವ
**
ಭಕ್ತವತ್ಸಲಾ ಬಾರಾ ನಿತ್ಯನಿರ್ಮಲ ತೋರಾ ನಿನ್ನ ರೂಪವ
ಸತ್ಯ ಸುಂದರಾ ಸ್ವಾಮೀ ತತ್ವಶೀಲರಾ ಪ್ರೇಮಿ
ಸತ್ಯ ಸುಂದರಾ ಸ್ವಾಮೀ ತತ್ವಶೀಲರಾ ಪ್ರೇಮಿ
ಭಕ್ತವತ್ಸಲಾ ಬಾರಾ ನಿತ್ಯ ನಿರ್ಮಲ ತೋರಾ ನಿನ್ನ ರೂಪವ
* * * *
ಚಿತ್ರ : ಭೂಕೈಲಾಸ
ಸಾಹಿತ್ಯ : ಕು.ರಾ.ಸೀ.
ಸಂಗೀತ : ಆರ್. ಸುದರ್ಶನಂ
ಮೂಲ ಗಾಯನ : ಸಿ. ಎಸ್ . ಜಯರಾಮನ್
* * * *
ಅನ್ಯದೈವವಾ ಅರಿಯೇ ಎ .....ಏ .....
ಅನ್ಯದೈವವಾ ಅರಿಯೇ ನಿನ್ನ ಪಾದವಾ ತೊರೆಯೇ
ಅನ್ಯದೈವವಾ ಅರಿಯೇ ನಿನ್ನ ಪಾದವಾ ತೊರೆಯೇ
ಸನ್ನುತಾಂಗ ನಿನ್ನ ಸೌಮ್ಯರೂಪ ನೀ ತೋರು ಬಾ
ಸನ್ನುತಾಂಗ ನಿನ್ನ ಸೌಮ್ಯರೂಪ ನೀ ತೋರು ಬಾ
ಭಕ್ತವತ್ಸಲಾ ಬಾರಾ ನಿತ್ಯ ನಿರ್ಮಲ ತೋರಾ ನಿನ್ನ ರೂಪವ
* * * *
Track No. 239
ಅಪ್ಲೋಡ್ : ಪ್ರಸನ್ನ ಶರ್ಮ
* * * *
ದೇಹಿ ಎಂದರೆ ಕೋಟಿ ವರವೀವ ತಂದೆ *
ಪಾಹಿ ಎಂದರೆ ದಿವ್ಯ ಪದತರುವೆ ಇಂದೇ*
ಸ್ನೇಹಮಯ ನಿನ್ನ ಶುಭನಾಮ ಜಪವೊಂದೇ *
ನೇಮದಿಂದಾಚಾರಿಸಲ್ ನೀ ವನಕೆ ಬಂದೇ *
ವರ ವರ್ಷ ಧಾರೆಯೆನು ಕರೆವ ಕಾರ್ಮುಗಿಲೇ *
ದುರಿತಾಂಧಕಾರವನು ಹರಿದೆಸೆವ ಹಗಲೇ*
ಭರದಿಂದ ಮೈದೋರು ಭವಪಾಶ ನಾಶ
ಹರಹರ ಮಹಾದೇವ ಕೈಲಾಸ ವಾಸಾ
ಕೈಲಾಸ ವಾಸಾ
**
ಮೌನವೇನಿದು ಮಂಗಳಾನನ ಬಿನ್ನಹ ಮನ್ನಿಸಯಾ
ಸೋಮಶೇಖರ ಪ್ರೇಮಸಾಗರ ಕೋರಿಕೆ ತೀರಿಸಯಾ
ಮೌನವೇನಿದು ಮಂಗಳಾನನ ಬಿನ್ನಹ ಮನ್ನಿಸಯಾ
ಸೋಮಶೇಖರ ಪ್ರೇಮಸಾಗರ ಕೋರಿಕೆ ತೀರಿಸಯಾ
ತಾಳಲಾರೆನು ಫಾಲಲೋಚನ ಈ ಪರಿತಾಪವ ನಾ
ತಾಳಲಾರೆನು ಫಾಲಲೋಚನ ಈ ಪರಿತಾಪವ ನಾ
ಸಾಕುಸಾಕೀ ಸಾವಧಾನದ ಬಿಂಕದ ಬಿನ್ನಾಣ
ಸಾಕುಸಾಕೀ ಸಾವಧಾನದ ಬಿಂಕದ ಬಿನ್ನಾಣ
ಮೌನವೇನಿದು ಮಂಗಳಾನನ ಬಿನ್ನಹ ಮನ್ನಿಸಯಾ
ಸೋಮಶೇಖರ ಪ್ರೇಮಸಾಗರ ಕೋರಿಕೆ ತೀರಿಸಯಾ
ಶಂಕರಾ ಶಿವಶಂಕರ ಪ್ರಳಯಾಂಕರಾ ಅಭಯಂಕರಾ
ಶಂಕರಾ ಶಿವಶಂಕರ ಪ್ರಳಯಾಂಕರಾ ಅಭಯಂಕರಾ
ಶಂಕರಾ ಶಿವಶಂಕರ ಪ್ರಳಯಾಂಕರಾ ಅಭಯಂಕರಾ
*************
*Thank you All *