ನಿನ್ನೆ ನೋಡೊ ಆಸೆ
ಏನೋ ಹೇಳೊ ಆಸೆ
ನಿನ್ನೆ ನೋಡೊ ಆಸೆ
ಏನೋ ಹೇಳೊ ಆಸೆ
ಸವಿಮಾತನು ಆಡಲು ಏತಕೆ
ನಿನ್ನ ಕಣ್ಣಲಿ ತುಂಬಿದೆ ನಾಚಿಕೆ
ಚೆಲುವೆ ಸ್ನೇಹಕೆ ನೀಡಲೇ ಕಾಣಿಕೆ
ನಿನ್ನೆ ನೋಡೊ ಆಸೆ
ಏನೋ ಹೇಳೊ ಆಸೆ
ನಯನವು ನೋಡಿದ ಮೊದಲನೆ ದೇವರು
ಗೆಳೆಯ ನೀನೆ ತಾನೇ..
ಅರಿಯದೆ ಪ್ರೇಮವು ಅರಳಲು ಸೋತೆನು
ಏಕೋ ನಾನು ಕಾಣೆ
ಬಿಡಲಾರೆ ಇನ್ನು ನಿನ್ನ
ನನ್ನಾಣೆ ನೀನೆ ಪ್ರಾಣ
ಹೊಸ ಬಾಳಿನ ಪ್ರೀತಿಯ ಗೀತೆಯ
ಹಾಡುತ ಬಂದಿರುವೆ
ಸರಸದಿ ಸೇರಿ ಪ್ರಣಯವ ತೋರಿ
ಸುಖ:ವನು ತಂದೆ ಚೆಲುವೆ ಬಾಳಿಗೆ
ನಿನ್ನೆ ನೋಡೊ ಆಸೆ
ಹುಂ ಹುಂ
ಏನೋ ಹೇಳೊ ಆಸೆ
ಆಹಾ.......ಸವಿಮಾತನು ಆಡಲು ಏತಕೆ
ನಿನ್ನ ಕಣ್ಣಲಿ ತುಂಬಿದೆ ನಾಚಿಕೆ
ಚೆಲುವೆ ಸ್ನೇಹಕೆ ನೀ..ಡಲೇ ಕಾಣಿಕೆ
ಹುಂ ಹುಂ
ಯಾರಿಗೂ ಬೇಡದ ನನ್ನಲಿ ಈ ಬಗೆ
ಪ್ರೀತಿ ನಿನಗೆ ಏಕೆ
ಯಾರಿಗೂ ಕಾಣದ ಚಿನ್ನದ ಮನಸನು
ಕಂಡು ನಾನು ಸೋತೆ
ಬಲು ಜಾಣೆ ಮಾತಿನಲ್ಲಿ
ಗುಣವಂತ ನಡತೆಯಲ್ಲಿ
ನೀ ನಡೆಯುವ ಹಾದಿಗೆ ಹೂಗಳ ಹಾಸಲು ಬಂದಿಹೆನು
ರಸಿಕನೆ ನಿನ್ನ ಸವಿನುಡಿ ಜೇನ
ಸವಿಯುತ ಸ್ವರ್ಗ ಇಲ್ಲೇ ಕಂಡೆನು
ನಿನ್ನೆ ನೋಡೊ ಆಸೆ
ಏನೋ ಹೇಳೊ ಆಸೆ
ಸವಿಮಾತನು ಆಡಲು ಏತಕೆ
ನನ್ನ ಕಣ್ಣಲಿ ತುಂಬಿದೆ ನಾಚಿಕೆ
ಚೆಲುವೆ ಸ್ನೇ..ಹಕೆ
ನೀಡಲೇ...ಕಾಣಿಕೆ