ಗ: ಓ ಹೋ ಹೋ...ಓ ಓ ಓ ಓ ಓ.....
ಹೆ: ..ಆ ಆಹಾ ಹಾ ಹಾ...ಆಹಾ ಆ ಆ ಆ ಆ ಆ
ಗ: ಉತ್ತರ ಧ್ರುವದಿಂ
ದಕ್ಷಿಣ ಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ
ಹೆ: ಸೂರ್ಯನ ಬಿoಬಕೆ
ಚಂದ್ರನ ಬಿಂಬವೂ
ರಮ್ಮಿಸಿ ನಗೆಯಲಿ ಮೀಸುತಿದೆ
ಗ: ಭೂ ರಂಗಕೆ
ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ಹೆ: ಭೂ ರಂಗಕೆ
ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ಗ: ತುoಬುತ ತುಳುಕುತ
ತೀಡುತ ತನ್ನೊಳು ತಾನೇ
ಸವಿಯನು ಸವಿಯುತಿದೆ
ಇಬ್ಬರೂ : ತಾನೇ ಸವಿಯನು ಸವಿಯುತಿದೆ
ಹೆ: ಉತ್ತರ ಧ್ರುವದಿಂ
ದಕ್ಷಿಣ ಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ
ಹೆ: ಭೂವನ ಕುಸುಮಿಸಿ
ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸೆಯಿಸಿತು
ಗ: ಭೂವನ ಕುಸುಮಿಸಿ
ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸೆಯಿಸಿತು
ಹೆ:ಮಿತ್ರನ
ಮೈತ್ರಿಯ
ಒಸಗೆ ಮಸಗದಿದೆ
ಮರುಕದ ಧಾರೆಯ ಮಸೆಯಿಸಿತು
ಇಬ್ಬರೂ : ಮರುಕದ
ಧಾರೆಯ ಮಸೆಯಿಸಿತು
ಗ: ಉತ್ತರ ಧ್ರುವದಿಂ
ದಕ್ಷಿಣ ಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ
ಸಹಕಾರ
ಗ: ಅಕ್ಷಿಣಿ ಮೀಲನ
ಮಾಡದ ನಕ್ಷತ್ರದ ಗಣ
ಗಗನದಿ ಹಾರದಿದೆ
ಹೆ: ಅಕ್ಷಿಣಿ ಮೀಲನ
ಮಾಡದ ನಕ್ಷತ್ರದ ಗಣ
ಗಗನದಿ ಹಾರದಿದೆ
ಗ: ಬಿದಿಗೆಯ ಬಿಂಬಾ
ಧರದಲಿ ಇಂದಿಗೂ
ಮಿಲನದ ಚಿಹ್ನವು
ತೋರದಿದೆ
ಇಬ್ಬರೂ : ಮಿಲನದ
ಚಿಹ್ನವು ತೋರದಿದೆ
ಉತ್ತರ ಧ್ರುವದಿಂ
ದಕ್ಷಿಣ ಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿoಬಕೆ
ಚಂದ್ರನ ಬಿಂಬವೂ
ರಂಬಿಸಿ ನಗೆಯಲಿ
ಮೀಸುತಿದೆ