menu-iconlogo
logo

Bachiko Nannalli

logo
เนื้อเพลง
{F}:ಬಚ್ಚಿಕೋ ನಿನ್ನಲಿ ನಿನ್ನೆದೇ ಗೂಡಲಿ ಗುಬ್ಬಿಯ ಹಾಗೆ ನಾ ಇರುವೆನೂ ನಿನ್ನಲಿ.....

{M}: ತುಂಬಿಕೋ ನಿನ್ನಲಿ ಪ್ರೀತಿಯಾ ಚಿಪ್ಪಲೀ ಸ್ವಾತಿಯಾ ಮುತ್ತು ನಾ ಆಗುವೇ ನಿನ್ನಲಿ....

{F}: ಕಣ್ಣ ರೆಪ್ಪೇಯ ಹಾಗೆ ನೀ ಕಾಪಾಡಿಕೊ..

{M}: ಪ್ರತಿ ಮಿಡಿತಕ್ಕು ನೀ ನನ್ನ ನೆನಪಿಟ್ಟುಕೊ

{M+F}: ಎಂದು ಎಂದೆಂದೂ ನೀ ನನ್ನ ಜೊತೆ ಸೇರಿಕೋ....

{M}: ಖಂಡಿತ....

{F}: ಹ್ಮ್ ಹ್ಮ್ [beautiful smile]

{F}: ಬಚ್ಚಿಕೋ...ನಿನ್ನಲಿ ನಿನ್ನದೆ ಗೂಡಲಿ ಗುಬ್ಬಿಯ ಹಾಗೆ ನಾ ಇರುವೆನು ನಿನ್ನಲಿ....

{M}: ಅಂಗೈಲಿ ದಿನ ನಿನ್ನ ಹೆಸರನು ನನ್ ಹೆಸರ ಜೊತೆ ನಾ ಬರೆದೆ ಅಂಗೈಲಿ ಅದು ಅಳಿಸಿ ಹೋದರು ನನ್ನೆದೆಗೆ ನೀ ಇಳಿದೆ.....

{F}: ಓದೋಕೆ ದಿನ ಕುಳಿತುಕೊಂಡರೆ ಪುಸ್ತಕದಲ್ಲೂ ನೀನೇನೆ....

ದಾರೀಲಿ ನನಗ್ಯಾರು ಕಾಣರು ಕಂಡೇ ಎಲ್ಲೂ ನಿನ್ನನ್ನೇ.....

{M}: ನಿನ್ನಾ ನೋಡಲು..

{F}: ಮಾತು ಆಡಲೂ....

{M+F}:ನನ್ನಾ ಜೀವ ಕಾಯೋದು ಹಗಲು ಇರುಳು.....

{F}: ಬಚ್ಚಿಕೋ ನಿನ್ನಲಿ ನಿನ್ನೆದೆ.... ಗೂಡಲಿ ಗುಬ್ಬಿಯಾ ಹಾಗೆ ನಾ ಇರುವೆನೂ ನಿನ್ನಲಿ....

{F}: ಈ ನಿನ್ನೆದೆಯ ತುಂಬು ಪ್ರೀತಿಯ ನೀ ಮುಚ್ಚಿ ಇಡ ಬೇಡ ಕಣೋ...ಈ ಮೌನವನು ಇನ್ನು ತಾಳೆನು ಬಾ ಹೇಳಿಬಿಡು ಎಲ್ಲವನು.....

{M}: ಸದ್ದೇ ಇಲ್ಲದೆ ಗೊತ್ತೆ ಆಗದೆ ಹುಟ್ಟೀ ಬಂದಾ ಪ್ರೀತಿನೋ....ನೀ ನಂಗೆ ಬಲು ಇಷ್ಟ ಎನ್ನಲು ಈ ನನ್ನೆದೆಯು ಕಾದಿಹುದು....

{F}: ನೀನೇ ಹೇಳು ಬಾ.....

{M}: ನೀನೇ ಹೇಳು ಬಾ....

{M+F}: ಹೇಗೆ ಎಲ್ಲ ಹೇಳೋದು ನಾನು ನಿನಗೆ....

{F}: ಬಚ್ಚಿಕೋ ನಿನ್ನಲಿ ನಿನ್ನೆದೇ ಗೂಡಲಿ ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ....

{M}: ತುಂಬಿಕೋ ನಿನ್ನಲಿ ಪ್ರೀತಿಯಾ ಚಿಪ್ಪಲಿ ಸ್ವಾತಿಯ ಮುತ್ತು ನಾ ಆಗುವೇ ನಿನ್ನಲೀ....

{F}: ಕಣ್ಣ ರೆಪ್ಪೇಯ ಹಾಗೆ ನೀ ಕಾಪಾಡಿಕೊ..

{M}: ಪ್ರತಿ ಮಿಡಿತಕ್ಕು ನೀ ನನ್ನ ನೆನಪಿಟ್ಟುಕೊ

{M+F}: ಎಂದು ಎಂದೆಂದೂ ನೀ ನನ್ನ ಜೊತೆ ಸೇರಿಕೋ....

{F}: ಸೇರ್ತಿಯ ಅಲ್ವಾ...

{M}: ಹ್ಮ್.....

{F}: ಬಚ್ಚಿಕೊ ಹ್ಮ್ ಹ್ಮ್ ಹ್ಮ್ಮು ..ಹ್ಮ್ ಹ್ಮ್....ಹ್ಮ್ ಹ್ಮು ಗುಬ್ಬಿಯ ಹಾಗೆ ನಾ ಹ್ಮ್ ಹ್ಮ್ ಹ್ಮೂ ನಿನ್ನಲಿ....

Bachiko Nannalli โดย R. P. Patnaik/Shreya Ghoshal – เนื้อเพลง & คัฟเวอร์