ಶಶಿ
F Female M Male
F ಈ ನಿನ್ನೆದೆಯ ತುಂಬ ಪ್ರೀತಿಯ
ನೀ ಮುಚ್ಚಿ ಇಡಬೇಡ ಕಣೊ
ಈ ಮುೌನವನು ಇನ್ನೂ ತಾಳೆನೂ
ಬಾ ಹೇಳಿ ಬಿಡು ಎಲ್ಲವನೂ
M ಸದ್ದೆ ಇಲ್ಲದೆ ಗೊತ್ತೆ ಆಗದೆ
ಹುಟ್ಟಿ ಬಂದ ಪ್ರೀತಿ ಇದು
ನೀ ನಂಗೆ ಬಲು ಇಷ್ಟ ಎನ್ನಲು
ಈ ನನ್ನೆದೆಯೂ ಕಾದಿಹುದೂ
F ನೀನೆ ಹೇಳು ಬಾ
M ನೀನೆ ಹೇ..ಳು ಬಾ
Both ಹೇಗೆ ಎಲ್ಲ ಹೇಳೋದು ನಾನು ನಿನಗೆ
F ಬಚ್ಚಿಕೊ ನಿನ್ನಲಿ ನಿನ್ನೆದೇ ಗೂಡಲೀ
ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ
M ತುಂಬಿಕೋ ನಿನ್ನಲಿ ಪ್ರೀತಿಯಾ ಚಿಪ್ಪಲಿ
ಸ್ವಾತಿಯಾ.. ಮುತ್ತು ನಾ ಆಗುವೇ ನಿನ್ನಲಿ
F ಕಣ್ಣ ರೆಪ್ಪೆಯ ಹಾಗೆನೆ ಕಾಪಾಡಿಕೋ
M ಪ್ರತಿ ಮಿಡಿತಕ್ಕು ನೀ ನನ್ನ ನೆನಪಿಟ್ಟುಕೊ
Both ಎಂದು ಎಂದೆಂದೂ
ನೀ ನನ್ನ ಜೊತೆ ಸೇರಿಕೊ..
F ಸೇರ್ತಿಯಾ ಅಲ್ವಾ
M ಹ್ಮ
F ಬಚ್ಚಿಕೊ ಹ್ಮಹ್ಮ ಹ್ಮಹ್ಮಹ್ಮ ಹ್ಮಹ್ಮ
ಗುಬ್ಬಿಯಾ ಹಾಗೆ ನಾ ಹ್ಮಹ್ಮ ನಿನ್ನಲಿ
ಶಶಿ