menu-iconlogo
logo

Deepadinda Deepava

logo
Şarkı Sözleri
ಗಂ ದೀಪದಿಂದ ದೀಪವ.ದೀಪವ... ದೀಪವ...

ಹಚ್ಚಬೇಕು ಮಾನವ... ಮಾನವ... ಮಾನವ...

ಪ್ರೀತಿಯಿಂದ ಪ್ರೀತಿ ಹಂಚಿರೋ...

ದೀಪದಿಂದ ದೀಪವ ಹಚ್ಚಬೇಕು ಮಾನವ

ಪ್ರೀತಿಯಿಂದ ಪ್ರೀತಿ ಹಂಚಲು

ಮನಸಿನಿಂದ ಮನಸನು ಬೆಳಗಬೇಕು ಮಾನವ

ಮೇಲು ಕೀಳು ಭೇದ ನಿಲ್ಲಲು...

ಭೇದವಿಲ್ಲ ಬೆಂಕಿಗೆ, ದ್ವೇಷವಿಲ್ಲ ಬೆಳಕಿಗೆ

ನೀ ತಿಳಿಯೋ... ನೀ ತಿಳಿಯೋ...

ಹೆ ದೀಪದಿಂದ ದೀಪವ ಹಚ್ಚಬೇಕು ಮಾನವ

ಪ್ರೀತಿಯಿಂದ ಪ್ರೀತಿ ಹಂಚಲು...

ಕೋರಸ್

ಸಿಂಗರ್ಸ್ ಆಫ್ ಕರ್ನಾಟಕ ಟೀಮ್ ಯಿಂದ?​?​?​?

ದೀಪಾವಳಿ ಹಬ್ಬದ ಶುಭಾಶಯಗಳು

ಹೆ ಆಸೆ ಹಿಂದೆ ದುಃಖ ಎಂದರು.

ರಾತ್ರಿ ಹಿಂದೆ ಹಗಲು ಎಂದರು...

ಗಂ ದ್ವೇಷವೆಂದು ಹೊರೆ ಎಂದರು...

ಹಬ್ಬವದಕೆ ಹೆಗಲು ಎಂದರು...

ಹೆ ಎರಡು ಮುಖದ ನಮ್ಮ ಜನುಮದ ವೇಷಾವಳಿ

ಗಂ ತೆಗೆದು ಹಾಲ್ಬೆಳಕ ಕುಡಿವುದೀ ದೀಪಾವಳಿ

ಹೆ ದೀಪದಿಂದ ದೀಪವ ಹಚ್ಚಬೇಕು ಮಾನವ

ಪ್ರೀತಿಯಿಂದ ಪ್ರೀತಿ ಹಂಚಲು

ಭೇದವಿಲ್ಲ ಬೆಂಕಿಗೆ ದ್ವೇಷವಿಲ್ಲ ಬೆಳಕಿಗೆ

ನೀ ತಿಳಿಯೋ... ನೀ ತಿಳಿಯೋ...

ಗಂ ದೀಪದಿಂದ ದೀಪವ ಹಚ್ಚಬೇಕು ಮಾನವ

ಪ್ರೀತಿಯಿಂದ ಪ್ರೀತಿ ಹಂಚಲು...

ಕೋರಸ್

?​?​?​?

ಗಂ ಮಣ್ಣಿನಿಂದ ಹಣತೆಯಾದರೆ,

ಬೀಜದಿಂದ ಎಣ್ಣೆಯಾಯಿತು.

ಹೆ ಅರಳಿಯಿಂದ ಬತ್ತಿಯಾದರೆ,

ಸುಡುವ ಬೆಂಕಿ ಜ್ಯೋತಿಯಾಯಿತು.

ಗಂ ನಂದಿಸುವುದು ತುಂಬ ಸುಲಭವೊ ಹೇ ಮಾನವ,

ಆನಂದಿಸುವುದು ತುಂಬ ಕಠಿಣವೋ ಹೇ ದಾನವ...

ಹೆ ದೀಪದಿಂದ ದೀಪವ

ಗಂ ಹಚ್ಚಬೇಕು ಮಾನವ

ಹೆ ಪ್ರೀತಿಯಿಂದ ಪ್ರೀತಿ ಹಂಚಲು

ಗಂ ಭೇದವಿಲ್ಲ ಬೆಂಕಿಗೆ

ಹೆ ದ್ವೇಷವಿಲ್ಲ ಬೆಳಕಿಗೆ

ಗಂ ನೀ ತಿಳಿಯೋ

ಹೆ ನೀ ತಿಳಿಯೋ

ಗಂ&ಹೆ ದೀಪದಿಂದ ದೀಪವ ಹಚ್ಚಬೇಕು ಮಾನವ

ಪ್ರೀತಿಯಿಂದ ಪ್ರೀತಿ ಹಂಚಲು

ಧನ್ಯವಾದಗಳು

madhu balakrishna, Deepadinda Deepava - Sözleri ve Coverları