ಚಿತ್ರ : ಎರಡುಕನಸು
ಸಾಹಿತ್ಯ ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯಕರು : ಪಿ. ಬಿ. ಶ್ರೀನಿವಾಸ್
ಬಾ ಡಿ ಹೋ ದ
ಬ ಳ್ಳಿ ಯಿಂ ದ
ಹೂ ವು ಅ ರ ಳ ಬ ಲ್ಲ ದೇ..
ಬಾಡಿಹೋದ, ಬಳ್ಳಿಯಿಂದ
ಹೂವು ಅರಳಬಲ್ಲದೇ..
ತಂತಿ ಹರಿದ, ವೀಣೆಯಿಂ..ದ
ನಾದ ಹರಿಯಬಲ್ಲದೇ..
ಮನಸು ಕಂಡ ಆಸೆಯೆ..ಲ್ಲ
ಕನಸಿನಂತೆ ಕರಗಿತಲ್ಲ
ಉಲ್ಲಾಸ ಇನ್ನೆಲ್ಲಿದೇ..ಏಎಏ..
ಬಾಡಿಹೋದ, ಬಳ್ಳಿಯಿಂದ
ಹೂವು ಅರಳಬ..ಲ್ಲದೇ..
ಹಣತೆಯಲ್ಲಿ, ದೀಪ ಉರಿಯೆ
ಬೆಳಕಿನಲ್ಲಿ ಬಾಳುವೆ..
ಹಣತೆಯಲ್ಲಿ ದೀಪ ಉರಿಯೆ
ಬೆಳಕಿನಲ್ಲಿ ಬಾ..ಳುವೆ..
ಧರೆಯೆಹತ್ತಿ, ಉರಿಯುವಾ..ಗ
ಬದು..ಕಲೆಲ್ಲಿ ಓ..ಡುವೇ..?
ಧರೆಯೆಹತ್ತಿ ಉರಿಯುವಾಗ
ಬದು..ಕಲೆಲ್ಲಿ ಓಡುವೇ..
ಬಾಡಿ ಹೋದ, ಬಳ್ಳಿಯಿಂದ
ಹೂವು ಅರಳಬಲ್ಲದೇ..
ನೀರಿನಲ್ಲಿ
ದೋಣಿಮುಳುಗೆ
ಈಜಿ ದಡವ ಸೇರುವೆ...
ನೀರಿನಲ್ಲಿ ದೋ..ಣಿ ಮುಳುಗೆ..
ಈಜಿ ದಡವ ಸೇ..ರುವೆ..
ಸುಳಿಗೆ ದೋಣಿ, ಸಿಲು..ಕಿದಾ..ಗ
ಬದು..ಕಿ ಬರಲು ಸಾಧ್ಯವೇ..?
ಸುಳಿಗೆ ದೋಣಿ,
ಸಿಲು..ಕಿದಾಗ,
ಬದು..ಕಿ ಬರಲು ಸಾಧ್ಯವೇ..?
ಬಾಳಪಗಡೆ ಆಟದಲ್ಲಿ
ಬರಿಯ ಕಾಯಿ ಎಲ್ಲರೂ..
ನಡೆಸುವಾ..ತ,
ಬೇರೆ ಅವನ,
ಇಚ್ಛೆ ಯಾರು ಬಲ್ಲರು..?
ಮನಸು ಕಂಡ ಆಸೆಯೆಲ್ಲ
ಕನಸಿನಂತೆ ಕರಗಿತಲ್ಲ
ಉಲ್ಲಾಸ ಇನ್ನೆಲ್ಲಿದೇ..ಏಎಏ..
ಬಾಡಿ ಹೋದ ಬಳ್ಳಿಯಿಂದ
ಹೂವು ಅರಳಬಲ್ಲದೇ...