menu-iconlogo
huatong
huatong
avatar

Januma janumadallu

S. Janakihuatong
miariley1huatong
Lời Bài Hát
Bản Ghi
ಗ)ಜನುಮ ಜನುಮದಲ್ಲು ನಿನ್ನೋಲವು ಬೇಡುವೆ

ಹೆ)ನನ್ನ ಜೀವ ನಿನ್ನ ಮುಡುಪಾಗಿ ಹೋಗಿದೆ

ಗ)ಏಕೋ ಏನೋ ಆಸೆ ಮೀಟಿದೆ

ಹೆ)ಬಾಳ ದಾರಿ ಹೂವು ಹಾಸಿದೆ

ಗ)ಇಂತ ಬಂದದಿಂದ ಅನುಬಂಧ ಮೂಡಿದೆ

ಹೆ)ಜನುಮ ಜನುಮದಲ್ಲು ನಿನ್ನೋಲವು ಬೇಡುವೆ

ಗ)ನನ್ನ ಜೀವ ನಿನ್ನ ಮುಡುಪಾಗಿ ಹೋಗಿದೆ

ಗ)ವಿರಹ ಕಳೆದು ಹರುಷವ ನೀಡಿದೆ

ಸರಸ ಬೆಸೆದು ಮಿಲನಕೆ ಕೂಗಿದೆ

ಹೆ)ದಿನವೂ ಸೆಳೆದು ಕನಸಲಿ ಕಾಡಿದೆ

ಹಗಲು-ಇರುಳು ದಹಿಸುತ ಬಾಡಿದೆ

ಗ)ಹೆ.. ಪ್ರಣಯದ ಸುಖವ ತೋರು ನನ್ನ ಕೋಗಿಲೆ..

ಹೆ)ಅನುದಿನ ಇರಲು ನಾಳೆ ಏಕೆ ಈಗಲೇ

ಗ)ಒಲವಿಂದ ಬಳಸೆನ್ನ ತೋರು ಪ್ರೀತಿಯ

ಹೆ)ಈ ತನುವಲಿ ನಾ ಬರೆದಿಹೇ ನಿನ್ನ ಮೋಹವ

ಗ)ಜನುಮ ಜನುಮದಲ್ಲು ನಿನ್ನೋಲವು ಬೇಡುವೆ

ಹೆ)ನನ್ನ ಜೀವ ನಿನ್ನ ಮುಡುಪಾಗಿ ಹೋಗಿದೆ

ಗ)ತಂದ ನಾನಾ ತಂದ ನಾನಾ

ಹೆ)ತನ ತಾನ ತಂದ ನ ತಂದ ನಾನಾ

ಹೆ)ತಂದ ನಾನಾ ತಂದ ನಾನಾ

ಗ)ತನ ತಾನ ತಂದ ನ ತಂದ ನಾನಾ

ಹೆ)ಭೂವಿಗೆ ಅಮರ ಗಗನದ ಆಸರೆ

ನನಗೆ ಮಧುರ ಇನಿಯನ ಈ ಸೇರೆ

ಗ)ನದಿಗೆ ಕಡಲು ತೊಡಿಸಿದೆ ಬಂಧನ

ನಿನಗೆ ಕೊಡುವೆ ಉಡುಗೊರೆ ಚುಂಬನ

ಹೆ)ಹೊ....ಬಗೆ ಬಗೆ ಸವಿಯ ಮೇಳ ನಮ್ಮ ಜೀವನ..

ಗ)ಹೊಸತನ ಹರಿವ ಪ್ರೀತಿ ಹೊಕ್ಕ ಮೈ ಮನ

ಹೆ)ನಿನಗೆಂದೆ ಕೊಡಲೆಂದೆ ಜೀವ ಕಾದಿದೆ

ಗ)ಈ ಹೃದಯವು ಈ ಚೆಲುವೆಗೆ ಎಂದೋ ಸೋತಿದೆ

ಹೆ)ಜನುಮ ಜನುಮದಲ್ಲು ನಿನ್ನೋಲವು ಬೇಡುವೆ

ಗ)ನನ್ನ ಜೀವ ನಿನ್ನ ಮುಡುಪಾಗಿ ಹೋಗಿದೆ

ಹೆ)ಏಕೋ ಏನೋ ಆಸೆ ಮೀಟಿದೆ

ಗ)ಬಾಳ ದಾರಿ ಹೂವು ಹಾಸಿದೆ

ಹೆ)ಇಂತ ಬಂದದಿಂದ ಅನುಬಂಧ ಮೂಡಿದೆ

ಗ)ಜನುಮ ಜನುಮದಲ್ಲು ನಿನ್ನೋಲವು ಬೇಡುವೆ

ಹೆ)ನನ್ನ ಜೀವ ನಿನ್ನ ಮುಡುಪಾಗಿ ಹೋಗಿದೆ

Nhiều Hơn Từ S. Janaki

Xem tất cảlogo