ಗಿರಿಕನ್ಯೆ
(ಹೆ) ನಗುನಗುತಾ...
ನೀ ಬರುವೆ..
ನಗುನಗುತಾ ನೀ ಬರುವೆ
ನಗುವಿನಲ್ಲೇ..ಮನಸೆಳೆವೆ
ಕುಣಿಸಲು ನೀನು, ಕುಣಿಯುವೆ ನಾನು
ಮರೆಯುವೆ ಜಗವನ್ನೇ...
(ಗ) ಆ.. ನಗುನಗುತಾ ನೀ ಬರುವೆ
ನಗುವಿನಲ್ಲೇ..ಮನಸೆಳೆವೆ
ಕುಣಿಸಲು ನೀನು, ಕುಣಿಯುವೆ ನಾನು
ಮರೆಯುವೆ ಜಗವನ್ನೇ...ಏಏಏ
ನಗುನಗುತಾ ನೀ ಬರುವೆ
ನಗುವಿನಲ್ಲೇ..ಮನಸೆಳೆವೆ
(ಹೆ) ನಗುನಗುತಾ (ಗ) ಆ
(ಹೆ) ನೀ ಬರುವೆ (ಗ) ಹೌದು
(ಹೆ) ನಗುವಿನಲ್ಲೇ ಮನಸೆಳೆವೆ
(ಗ) ನಗು
ಸಾಹಿತ್ಯ ಸಹಾಯ ಟ್ರ್ಯಾಕ್ ನೀಡಿದವರು
ಡಾ. ಭಾರ್ಗವಿ ಎಸ್ ಭಟ್
ಜಾಲಕ್ಕೆ ರವಾನೆ : ಮೋಕ್ಷಿತ್ ಜನ್ಯ
(ಗ) ನಗುವೆ ಮಾತಾಗಿ ಮಾತೇ ಮುತ್ತಾಗಿ
ಆ ಮುತ್ತೇ ಹೆಣ್ಣಾಗಿದೆ..
(ಹೆ) ಆಹಾ
(ಗ) ಹೆಣ್ಣೇ ಹೂವಾಗಿ , ಹೂವೇ ಹಣ್ಣಾಗಿ
ಹಣ್ಣು ಕಣ್ಣಾ ತುಂಬಿದೆ....ಏಏಏ
(ಹೆ) ಒಲವೆ ಗೆಲುವಾಗಿ
ಗೆಲುವೆ ಚೆಲುವಾಗಿ, ಚೆಲುವೆಲ್ಲ ನಿನ್ನಲ್ಲಿದೆ
ನಿನ್ನಾ ರೂಪಲ್ಲಿ , ನಿನ್ನಾ ಮನದಲ್ಲಿ
ಎಂದೂ ನಾನು ಬೆರೆತೆ
(ಗ) ನೀನೆ ನಾನಾಗಿ , ನಾನೇ ನೀನಾಗಿ
ನನ್ನೇ ನಾ ಮರೆತೇ...
(ಹೆ) ನಗುನಗುತಾ ನೀ ಬರುವೆ
ನಗುವಿನಲ್ಲೇ ಮನಸೆಳೆವೆ
(ಗ) ನಗುನಗುತಾ ನೀ ಬರುವೆ
ನಗುವಿನಲ್ಲೇ ಮನಸೆಳೆವೆ..
(ಗ) ಆಹಾ.....
(ಹೆ) ಆಹಾಹಾ....
(ಗ) ಆಹಾ ಆಹಾ....
(ಹೆ) ಆಆಹಾ...
(ಗ) ಆ.....
(ಹೆ) ಆಆಹಾ.....ಆ......
(ಗ) ಆಆಹಾ...
(ಹೆ) ಏಕೋ ಸಂಕೋಚ
ಏನೋ ಸಂತೋಷ
ನಿಂತಲ್ಲೆ ನಿಲ್ಲಲಾರೆನೂ..
(ಗ) ನಿಜವಾಗಿ
(ಹೆ) ನಿನ್ನಾ ಮಾತಿಂದ
ಏನೋ ಆನಂದ
ಎಂದೂ ನಿನ್ನಾ ಬಿಡೆನು
(ಗ) ಹೂಮ್..ಊರಾ ಮಾತೇಕೆ
ಯಾರಾ ಹಂಗೇಕೆ
ಬಾ ಇಲ್ಲಿ ನೀ ಮೆಲ್ಲಗೆ..
ಯಾರೂ ಇಲ್ಲಿಲ್ಲ , ನಾವೇ ಇಲ್ಲೆಲ್ಲ
ಬೇಗ ಬಾ ಬಾ ಬಳಿಗೆ..ಏಏಏ
(ಹೆ) ಸೋತೆ ನಾನೀಗ ಏನೋ ಆವೇಗ
ಇನ್ನೂ ನಾ ತಾಳೆನು
(ಗ) ನಗುನಗುತಾ ನೀ ಬರುವೆ
ನಗುವಿನಲ್ಲೇ..ಮನಸೆಳೆವೆ
(ಹೆ) ಕುಣಿಸಲು ನೀನು ಕುಣಿಯುವೆ ನಾನು
ಮರೆಯುವೆ ಜಗವನ್ನೇ...ಏಏಏ
ನಗುನಗುತಾ ನೀ ಬರುವೆ
ನಗುವಿನಲ್ಲೇ ಮನಸೆಳೆವೆ
(ಗ) ನಗುನಗುತಾ ನೀ ಬರುವೆ
ನಗುವಿನಲ್ಲೇ ಮನಸೆಳೆವೆ
ಧನ್ಯವಾದಗಳು