menu-iconlogo
logo

Indu Ananda Naa Thalalare

logo
歌詞
ಇಂದು ಆನಂದ ನಾ ತಾಳಲಾ..ರೆ..

ಚಿನ್ನ ಮಾತಲ್ಲಿ ನಾ ಹೇಳಲಾರೆ..

ನನ್ನ ಕುಣಿಸಲು ಬಯಕೆಗಳು

ಕಂಡೆ ಹೊಸ ಹೊಸ ಕನಸುಗಳು

ನನ್ನ ಕುಣಿಸಲು ಬಯಕೆಗಳು

ಕಂಡೆ ಹೊಸ ಹೊಸ ಕನಸುಗಳು

ನೀನೆಂದೆಂದು ನನ್ನವಳೇ...

ಇಂದು ಆನಂದ ನಾ ತಾಳಲಾರೆ

ನಲ್ಲ ಮಾತಲ್ಲಿ ನಾ ಹೇಳಲಾರೆ

ನನ್ನ ಕುಣಿಸಲು ಬಯಕೆಗಳು

ಕಂಡೆ ಹೊಸ ಹೊಸ ಕನಸುಗಳು

ನನ್ನ ಕುಣಿಸಲು ಬಯಕೆಗಳು

ಕಂಡೆ ಹೊಸ ಹೊಸ ಕನಸುಗಳು

ನೀನೆಂದೆಂದು ನನ್ನವನೇ...

ಬಳಸುತಿದೆ ಲತೆ ಬಳಸುತಿದೆ

ಆಸರೆಬೇಕೆಂದು ವರವನ್ನು

ನಮ್ಮಂತೆ ಅನುರಾಗದೀ...

ನಲಿಯುತಿದೆ ಹೊಸ ಹೂಗಳಲಿ

ಜೀನನು ಹೀರುತ್ತಾ ದುಂಬಿಗಳು

ನಮ್ಮಂತೆ ಉಲ್ಲಾಸದೀ..

ನೋಡು ಈ ಸಂಜೆಯಲ್ಲಿ

ಬೀಸೋ ತಂಪಾದ ಗಾಳಿ

ಬಂದು ಸುಯ್ ಎಂದು ಹಾಡಿ

ನನ್ನ ಬಳಿ ಹೇಳಿದೆ

ನೀನೆಂದೆಂದು ನನ್ನವಳೇ....

ಇಂದು ಆನಂದ ನಾ ತಾಳಲಾರೆ…

ನನ್ನ ಮಾತಲ್ಲಿ ನಾ ಹೇಳಲಾರೆ…

ನನ್ನ ಕುಣಿಸಲು ಬಯಕೆಗಳು

ಕಂಡೆ ಹೊಸ ಹೊಸ ಕನಸುಗಳು

ನನ್ನ ಕುಣಿಸಲು ಬಯಕೆಗಳು

ಕಂಡೆ ಹೊಸ ಹೊಸ ಕನಸುಗಳು

ನೀನೆಂದೆಂದು ನನ್ನವಳೇ...

ಹರಿಯುತಿದೆ ನಧಿ ಹರಿಯುತಿದೆ

ಸಾಗರ ಎಲ್ಲೆಂದು ಹುಡುಕುತಿದೆ

ನಮ್ಮಂತೆ ಒಂದಾಗಲು...

ಕರೆಯುತಿದೆ ಎಲೆ ಮರೆಯಲ್ಲಿ

ಕೋಗಿಲೆಯೊಂದು ಹಾಡುತಿದೆ

ಸಂಗಾತಿಯ, ಸೇರಲು....

ನೋಡು.. ಬಾನಂಚಿನಲ್ಲಿ

ಸಂಜೆ.. ರಂಗನ್ನು ಚೆಲ್ಲಿ

ನಮಗೆ.. ಶುಭವನ್ನು ಕೋರಿ

ನನ್ನ.. ಬಳಿ ಹೇಳಿದೆ

ನೀನೆಂದೆಂದು ನನ್ನವನೇ....

ಇಂದು ಆನಂದ ನಾ ತಾಳಲಾರೆ..

ಚಿನ್ನ ಮಾತಲ್ಲಿ ನಾ ಹೇಳಲಾರೆ..

ನನ್ನ ಕುಣಿಸಲು ಬಯಕೆಗಳು

ಕಂಡೆ ಹೊಸ ಹೊಸ ಕನಸುಗಳು

ನನ್ನ ಕುಣಿಸಲು ಬಯಕೆಗಳು

ಕಂಡೆ ಹೊಸ ಹೊಸ ಕನಸುಗಳು

ನೀನೆಂದೆಂದು ನನ್ನವಳೇ...

ಇಂದು ಆನಂದ ನಾ ತಾಳಲಾರೆ

ನನ್ನ ಮಾತಲ್ಲಿ ನಾ ಹೇಳಲಾರೆ

ನನ್ನ ಕುಣಿಸಲು ಬಯಕೆಗಳು

ಕಂಡೆ ಹೊಸ ಹೊಸ ಕನಸುಗಳು

ನನ್ನ ಕುಣಿಸಲು ಬಯಕೆಗಳು

ಕಂಡೆ ಹೊಸ ಹೊಸ ಕನಸುಗಳು

ನೀನೆಂದೆಂದು ನನ್ನವನೇ...

ನೀನೆಂದೆಂದು ನನ್ನವಳೇ...

ಲಾ ಲಾ ಲಾ ಲ ಲ ಲ ಲಾ ಲ ಲ ಲ

Indu Ananda Naa Thalalare Dr. Rajkumar - 歌詞和翻唱