ರೀ ಮಾಲತಿ
ಏನ್ರೀ
ನಮ್ ಯಜಮಾನ್ರ್ ಜೊತೆ ಶಾಪಿಂಗ್ ಹೋಗಿದ್ದೆ
ಕಾಣ್ತಾ ಇದೆಯಲ್ಲಾ ರೀ
ಫ್ರಿಡ್ಜು ಹದಿನೆಂಟು ಸಾವಿರ
ಅಯ್ಯೊ ನಿನ್ನ
ಟಿ ವಿ ಹದಿನಾಲ್ಕು ಸಾವಿರ
ಎಲಾ ಇವ್ಳಾ
ಈ ವಾಷಿಂಗ್ ಮಷಿನ್ನು ಹದಿನೆಂಟು ಸಾವಿರ
ಶಿವನೇ ಗತಿ
ಗ್ಯಾಸ್ ಸಿಲೆಂಡರು ಹತ್ತು ಸಾವಿರ
ರಾಮ ರಾಮ
ಅಮ್ಮಮ್ಮಾ..ಇದೆಲ್ಲ ನಿಮ್ ಯಜಮಾನ್ರು
ಕೊಡ್ಸಿದಾರೆ ಅಂದ್ರೆ ನಂಬೋಕೇ ಆಗ್ತಿಲ್ಲ ರೀ..
ಹಾ..
ರೀ ವತ್ಸಲಾ ಅವ್ರೇ..
ದಯವಿಟ್ಟು ಸ್ವಲ್ಲ ಒಳಗಡೆ ಬರ್ತೀರಾ
ಅಯ್ಯೋ..ಸುಮ್ಮನಿರ್ರಿ ಸುಮ್ಮನಿರ್ರಿ
ನಾವು ಯಾರ್ಗೂ ಕಮ್ಮೀಯಿಲ್ಲಾ..
ಅಂದ್ರೆ
ನಾವು ಯಾರ್ಗೂ ಕಮ್ಮೀಯಿಲ್ಲಾ..
ಹಾಹಾ
ನಮ್ ಯಜಮಾನ್ರ್ ಅಂದ್ರೇ ಸುಮ್ನೇ.. ಅಲ್ಲಾ..
ಹಾಗ್ ಬಾ ದಾರೀಗೆ
ರಾಣಿ ನಿಂಗೆ ಬುದ್ಧಿ ಇಲ್ಲಾ.
ಒಣ ಜಂಭಾ ಮೈಗೆ ಒಳ್ಳೇ..ದ್ ಅಲ್ಲಾ..
ಜಂಭೇ..ನ್ ಬಂತು..
ತಂತಾನೇ ಬಂತು
ಬೀದೀ..ಲ್ ನಿಂತು..ಬೀಗಬಾ..ರ್ದಂತು.
ಅಯ್ಯೋ..ಸುಮ್ಮನಿರ್ರಿ ಸುಮ್ಮನಿರ್ರಿ
ನಾವು ಯಾರ್ಗೂ ಕಮ್ಮೀಯಿಲ್ಲಾ..
ಅದು ಸರಿ
ನಮ್ ಯಜಮಾನ್ರ್ ಅಂದ್ರೇ ಸುಮ್ನೇ ಅಲ್ಲಾ..
ಅಯ್ಯೊ ನಿನ್ನ ಲೇ.
ರಾಣಿ ನಿಂಗೆ ಬುದ್ಧಿ ಇ.ಲ್ಲಾ.
ಹಾ..
ಒಣ ಜಂಭಾ ಮೈಗೆ ಒಳ್ಳೇ..ದ್ ಅಲ್ಲಾ..
ಆಆ
ಚಿತ್ರ: ಶಬ್ದವೇಧಿ (2000)
ಸಾಹಿತ್ಯ ಮತ್ತು ಸಂಗೀತ: "ನಾದಬ್ರಹ್ಮ ಹಂಸಲೇಖ"
ಗಾಯನ: ಡಾ ರಾಜ್ ಕುಮಾರ್
ಮತ್ತು ಮಂಜುಳಾ ಗುರುರಾಜ್
ಚಿನ್ನ ಬಾ ಬಾ ಬಾ ಚಿನ್ನ ಬಾ ಬಾ ಚಿ.ನ್ನಾ.
ಚಿನ್ನಾ ಅಂತಾ ಕರೆಯೊಕ್ ನನ್ನಾ..
ಏನೀಗ
ತಾವು ಕಾಸಿನ್ ಸರ ತಂದ್ರೆ..ಚೆನ್ನ
ಇದೇನ್ ನಿಮ್ ತಾತನ್ ಮನೆ ಗಂಟ್ ಅಲ್ಲಾ ಕಣೇ
ರಾಣಿ ಅಂತ ಮುಡ್ಸೋದ್ ನಿನ್ನ..
ಲೇ ಎಲ್ಲಿಂದ ತರ್ಲಿ ಅರಮನೆಯನ್ನ..
ಒಡವೆ ನೋಡಿ ಅಳಿಯುವರು..ತಿನ್ನೋದ್ ಯಾರು ನೋಡರು
ತಿನ್ನದೇ ರೋಗ ಬಂದರೇ..ಹೊಗ್ಳೋರ್ ಬಂದು ಕಾಯರು..
ಹಾ. ತಾವ್ಯಾಕ್ ಇರೋದ್ ದ್ಯಾವರು..
ಅಯ್ಯೊ ನಿನ್ನ
ಗಂಧ ಹಚ್ರೀ..
ಅಯ್ಯೋ ಇವ್ಳಾ.
ಬಾಗಿಲು ಮುಚ್ರಿ..
ಜಯಿಸು..ಆಸೆಯಾ..
ಗಳಿಸು..ಪ್ರೀತಿಯಾ..
ನಿಲ್ಲಸ್ರೀ..ನೀತಿಯಾ..
ಕೊಡ್ರೀ..ಪಪ್ಪಿಯಾ..
ಅಯ್ಯೋ..ಸ್ವಲ್ಪ ತಡಿಯೇ ಸ್ವಲ್ಪ ತಡಿಯೇ
ರಾಣಿ ನಿಂಗೆ ಬುದ್ಧಿ ಇಲ್ಲಾ.
ಹಾ..ಆ ಆ
ಅತಿ ಆಸೆ ಸತಿಗೆ ಶೋಭೇ ಅಲ್ಲಾ..
ಆ ಹಾಹಾಹಾ
ನೀವು ಯಾರ್ಗೂ ಕಮ್ಮಿ ಇಲ್ಲಾ..
ಅದು ನಿಂಗ್ ಗೊತ್ತಲ್ಲಾ.
ನಮ್ ಯಜಮಾನ್ರ್ ಮುಂದೆ ದೇವ್ರೂ..ಇಲ್ಲಾ..
ಕೊಟ್ಲಪ್ಪ ಭಾರೀ ಟೈಟ್ಲು.
On date: 22.04.2019
ಲಲ್ಲಲಲ್ಲ ಲಲ್ಲಲಲ್ಲ ಲಾಲ ಓಹೋ ಓಹೋಹೋ..
ಲಾಲಲಾಲ ಲಾಲಲಾಲ ಲಾಲ ಓಹೋ ಓಹೋಹೋ..
ಲಕ್ಷ್ಮಿ ಎಲ್ಲರಿಗ್ ಒಲಿಯಲ್ವಂತೆ.
ಅದಿಕ್ಕೆ
ಒಲಿದಾಗ ಜಂಭ ಪಟ್ರೇ.ನಂತೆ.
ಪಡು ಪಡು ಪಡು
ಎಷ್ಟೇ ದೊಡ್ಡವರಾದ್ರೇನಂತೆ..
ನಾವ್ ಬಂದಿದ್ದಾರಿ ಮರಿಬಾ.ರ್ದಂತೆ..
ಫಾರೀನ್ ಕಾರು ಇದ್ದರೂ..
ಆಟೊ ಯಾಕೇ ಏ.ರಲಿ..
ಪೆಟ್ರೋಲ್ ಸಿಗದೇ ಹೋದರೇ..
ಕಾಲೇ ಕಾರು ನೆನಪಿರಲಿ
ಇಂಥವ್ರಿಗೇನು ಹೇ.ಳಲಿ.
ಅಯ್ಯೊ ನಿನ್ನಾ(ನಗುತ್ತಾ)
ನಮ್ ಯಜಮಾನ್ರು..
ಅಯ್ಯೊ ಇವ್ಳಾ..(ನಗುತ್ತಾ)
ಹೈ ಕಮೀಷನರ್ರು..
ಬೀದೀ..ಲ್ ನಿಂತು..
ಬೀಗಬಾ..ರದಿಂತು..
ಜಂಭೇ..ನ್ ಬಂತು..
ನ್ಯಾಯ್ವಾಗೆ.. ಬಂತು..
ಅಯ್ಯೋ...
ಸಾಕು ಬನ್ರಿ ಸಾಕು ಬನ್ರಿ
ನಾವು ಯಾರ್ಗೂ ಕಮ್ಮಿ ಇಲ್ಲಾ..
ನಮ್ ಯಜಮಾನ್ರೀಗೇ ಸಾಟೀ..ಇಲ್ಲಾ
ನೀನು ಯಾರ್ಗೂ ಕಮ್ಮಿ ಇಲ್ಲಾ ಕಣೇ
ನಾವು ಯಾರ್ಗೂ ಕಮ್ಮಿ ಇಲ್ಲಾ..
ನಮ್ಮ ಯಜಮಾನಮ್ಮ ಸುಮ್ನೇ..ಅಲ್ಲಾ..
Don't forgot Like
ಧನ್ಯವಾದಗಳು...