ಗುಡಿ ಸೇರದಾ ಮುಡಿ ಏರದಾ
ಕಡೆಗಾಣಿಸೊ ಹೂವಲ್ಲಾ..
ಈಡೇರದಾ ಮನದಾಸೆಯಾ
ಮನೆಯಾಕೆಗೆ ನೆಲೆಯಿಲ್ಲಾ...
ಮನೆಯಾಕೆಗೆ ನೆಲೆಯಿಲ್ಲಾ...
ಗುಡಿ ಸೇರದಾ ಮುಡಿ ಏರದಾ
ಕಡೆಗಾಣಿಸೊ ಹೂವಲ್ಲಾ..
ಸ್ನೇಹದ ಸೌರಭ ತುಂಬಿದ ಸಂಪಿಗೆ
ಪ್ರೀತಿಯ ಕರಗಳ ಕಾಣುತಿದೇ
ಸ್ನೇಹದ ಸೌರಭ ತುಂಬಿದ ಸಂಪಿಗೆ
ಪ್ರೀತಿಯ ಕರಗಳ ಕಾಣುತಿದೇ
ಮಮತೆಯ ಮಲ್ಲಿಗೆ ಬಾಡದೆ ಲತೆಯಲಿ
ಕರೆದಿದೆ ನಿನ್ನನು ಬಾರಾ ಬಾರಾ ಬಾ..ರಾ
ಗುಡಿ ಸೇರದಾ ಮುಡಿ ಏರದಾ
ಕಡೆಗಾಣಿಸೊ ಹೂವಲ್ಲಾ..
ಸೇವೆಯ ನೀಡಲು ಮೀಸಲು ಎನ್ನುತ
ಒಲವಿನ ಸ್ವಾಗತ ಕೊರುತಿದೇ
ಸೇವೆಯ ನೀಡಲು ಮೀಸಲು ಎನ್ನುತ
ಒಲವಿನ ಸ್ವಾಗತ ಕೊರುತಿದೇ
ಅಂದವು ತುಂಬಿದೇ ಆದರ ತೋರಿದೇ
ಆಲಿಸಿ ಕರೆಯನು ಬಾರಾ ಬಾರಾ ಬಾ..ರಾ
ಗುಡಿ ಸೇರದಾ ಮುಡಿ ಏರದಾ
ಕಡೆಗಾಣಿಸೊ ಹೂವಲ್ಲಾ..
ನಂದನ ವನದಲಿ ಸಾಟಿಯ ಹೂಗಳು
ನಗುತಿವೆ ನೈದಿಲೆ ಅಳುತಿರಲೂ
ನಂದನ ವನದಲಿ ಸಾಟಿಯ ಹೂಗಳು
ನಗುತಿವೆ ನೈದಿಲೆ ಅಳುತಿರಲೂ
ನೋವನು ನೀಗಿಸಿ ಬಾಳನು ಬೆಳಗಲು
ಚಂದಿರ ನೀನೇ ಬಾರಾ ಬಾರಾ ಬಾ..ರಾ
ಗುಡಿ ಸೇರದಾ ಮುಡಿ ಏರದಾ
ಕಡೆಗಾಣಿಸೊ ಹೂವಲ್ಲಾ..
ಈಡೇರದಾ ಮನದಾಸೆಯಾ
ಮನೆಯಾಕೆಗೆ ನೆಲೆಯಿಲ್ಲಾ...
ಮನೆಯಾಕೆಗೆ ನೆಲೆಯಿಲ್ಲಾ...
ಗುಡಿ ಸೇರದಾ ಮುಡಿ ಏರದಾ
ಕಡೆಗಾಣಿಸೊ ಹೂವಲ್ಲಾ..