ಮುನಿಸು ತರವೇ.. ಮುಗುದೆ
ಹಿತವಾಗಿ ನಗ..ಲೂ ಬಾರದೆ
ಮುನಿಸು ತರವೇ ಮುಗುದೆ
ಹಿತವಾಗಿ ನಗ..ಲೂ ಬಾರದೆ
ಕರಿಮುಗಿಲ ಬಾನಿನಲ್ಲಿ ಮಿಂಚರಳಲು
ತಾರೆಗಳು ಮೈಯ ಬಳಸಿ ಜುಮ್ಮೆನ್ನಲು
ಕರಿಮುಗಿಲ ಬಾನಿನಲ್ಲಿ ಮಿಂಚರಳಲು
ತಾರೆಗಳು ಮೈಯ ಬಳಸಿ ಜುಮ್ಮೆನ್ನಲು
ನವ ಭಾವ ತುಂಬಿ ತುಂಬಿ ಮನ ಹಾಡಲು
ನವ ಭಾವ ತುಂಬಿ ತುಂಬಿ ಮನ ಹಾಡಲು
ತೆರದಂತಿದೆ ಭಾಗ್ಯದ ಬಾಗಿಲು
ಮುನಿಸು ತರವೇ ಮುಗುದೆ
ಹಿತವಾ..ಗಿ ನಗಲೂ ಬಾರದೆ
ಎಷ್ಟೊಂದು ಕಾಲದಿಂದ ಹಂಬಲಿಸಿದೆ
ನೀ ಬಂದು ಸೇರಿ ನನ್ನ ಮುದಗೊಳಿಸಿದೆ
ಎಷ್ಟೊಂದು ಕಾಲದಿಂದ ಹಂಬಲಿಸಿದೆ
ನೀ ಬಂದು ಸೇರಿ ನನ್ನ ಮುದಗೊಳಿಸಿದೆ
ಜೀವನದ ನೂರು ಕನಸು ನನಸಾಗಿದೆ.. ಏ
ಜೀವನದ ನೂ...ರು ಕನಸು ನನಸಾಗಿದೆ
ಮುನಿಸೇತಕೆ ಈ ಬಗೆ ಮೂಡಿದೆ
ಮುನಿಸು ತರವೇ ಮುಗುದೆ
ಹಿತವಾಗಿ ನಗಲೂ ಬಾರದೆ
ಹೊಸ ಬಾಳ ಬಾಗಿಲಲ್ಲಿ ನಾವೀದಿನ
ನಿಂತಿರುವ ವೇಳೆಯಲ್ಲಿ ಏಕೀ ಮನ
ಹೊಸ ಬಾಳ ಬಾಗಿಲಲ್ಲಿ ನಾವೀದಿನ
ನಿಂತಿರುವ ವೇಳೆಯಲ್ಲಿ ಏಕೀ ಮನ
ವಾಗರ್ಥದಂತೆ ನಮ್ಮ ಈ ಮೈಮನ
ವಾಗರ್ಥದಂತೆ ನಮ್ಮ ಈ ಮೈಮನ
ಜತೆ ಸೇರಲು ಜೀವನ ಪಾವನ
ಮುನಿಸು ತರವೇ ಮುಗುದೆ
ಹಿತವಾಗಿ ನಗಲೂ ಬಾರದೆ
ಮುನಿಸು ತರವೇ ಮುಗುದೆ
ಹಿತವಾಗಿ ನಗಲೂ ಬಾರದೆ