ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ
ಹುಡುಗಿ ಒಣಗ್ಯಾವ ಹೂಬಳ್ಳಿ.
ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ
ಹುಡುಗಿ ಒಣಗ್ಯಾವ ಹೂಬಳ್ಳಿ..
ಏನು ತಿಳಿದಾಂಗ ಹೊಂಟಿ ಮಳ್ಳಿ.
ಏನು ತಿಳಿದಾಂಗ ಹೊಂಟಿ ಮಳ್ಳೀ.
ಗೆಳತಿ ಅಂಗಳಕ ಬಾರ ಹೊಳ್ಳಿ
ನನ್ನಾ. ಅಂಗಳಕ ಬಾರ ಹೊಳ್ಳಿ.
ನಾ. ಮರತಿಲ್ಲ ನಿನ್ನ ಹಳ್ಳಿ.
ನೆನಪು ಬರತೈತಿ ಹೊಳ್ಳಿ ಹೊಳ್ಳಿ.
ನಾ. ಮರತಿಲ್ಲ ನಿನ್ನ ಹಳ್ಳಿ.
ನೆನಪು ಬರತೈತಿ ಹೊಳ್ಳಿ ಹೊಳ್ಳಿ.
ಹುಡುಗಾಟಾದ ನಿನ್ನ ಛಾ.ಳಿ.
ಹುಡುಗಾಟಾದ ನಿನ್ನ ಛಾ.ಳಿ..ಹಾ.ಡಿ
ಆಡಿದ ಆ ಓಕುಳಿ
ಹಾ.ಡಿ ಆಡಿದ ಆ ಓಕುಳಿ
ಬಿಟ್ಟು ಹೊಂಟೆಲ್ಲ ನನ್ನ ಹಳ್ಳೀ..
ಹಳ್ಳದ ದಂಡ್ಯಾಗ ಗುಬ್ಬೀಯ ಗೂಡ ಕಟ್ಟಿ
ಆಡಿದ್ದು ನೀ ಮರೆತೀ ಏನ.
ಹಳ್ಳದ ದಂಡ್ಯಾಗ ಗುಬ್ಬೀಯ ಗೂಡ ಕಟ್ಟಿ
ಆಡಿದ್ದು ನೀ ಮರೆತೀ ಏನ.
ಹಾಕರಕಿ ಪಲ್ಯ ತಿಂದು ಹರಗ್ಯಾಡಿ ಬಂದಾಗ
ಬಡಸೀಕೊಂಡಿದ್ದು ಮರೆತೀ ಏನ.
ಮನಸ ತುಡುಗ ಮಾಡಿದ ಕಳ್ಳಿ.
ಮನಸ ತುಡುಗ ಮಾಡಿದ ಕಳ್ಳೀ.
ನನ್ನಾ. ಅಂಗಳಕ ಬಾರ ಹೊಳ್ಳಿ.
ಬಿಟ್ಟು ಹೊಂಟೆಲ್ಲ ನನ್ನ ಹಳ್ಳೀ..
ನಮ್ಮ ಜಾತಿ ಮೇಲಂತ ನಿಮ್ಮ ಜಾತಿ ಕೀಳಂತ
ಹೇಳ್ತಾನ ನಮ್ಮಪ್ಪ ಕುಂ.ತ.
ನಮ್ಮ ಜಾತಿ ಮೇಲಂತ ನಿಮ್ಮ ಜಾತಿ ಕೀಳಂತ
ಹೇಳ್ತಾನ ನಮ್ಮಪ್ಪ ಕುಂ.ತ.
ಸಿಟ್ಟೀಲೆ ಕೈಕಾಲ ಕಟ್ಟೀ ಬಡದಾರ
ನಿನ್ನ ಪ್ರೀತಿ ಮರಿಬೇಕಂತ.
ನಾ. ಇರಬೇಕ ಹೆಂಗ ತಾ.ಳಿ.
ನಾ. ಇರಬೇಕ ಹೆಂಗ ತಾ.ಳಿ.
ನೆನಪು ಬರತೈತಿ ಹೊಳ್ಳಿ ಹೊಳ್ಳಿ.
ನಾ. ಮರತಿಲ್ಲ ನಿನ್ನ ಹಳ್ಳೀ..
ಸತ್ತಾರ ಪಾಡ ಮರಿಯೋದು ಬ್ಯಾಡ
ಗೋರ್ಯಾಗ ಆಗೋನು ಜೋ.ಡ.
ಸತ್ತಾರ ಪಾಡ ಮರಿಯೋದು ಬ್ಯಾಡ
ಗೋರ್ಯಾಗ ಆಗೋನು ಜೋ.ಡ.
ಹಿರಿಯಾರ ಹಿರಿತನ ಕೋಯ್ತೈತಿ ಗೋ.ಣ
ಬಾಳೆಲ್ಲ ಮುಳ್ಳೀನ ಪಯಣ
ಇಲ್ಲಿ ಇರುವುದು ಹೆಂಗ ಬಾ.ಳಿ.
ಇಲ್ಲಿ ಇರುವುದು ಹೆಂಗ ಬಾ.ಳಿ.
ಭಾರೀ ಬಿಟ್ಟೈತಿ ಬಿರುಗಾಳಿ
ನಾ. ಮರತಿಲ್ಲ ನಿನ್ನ ಹಳ್ಳೀ..
ಜಗ ಐತಿ ಎಡವಟ್ಟಿ ಬರಬೇಕ ನಾವ್ ದಾಟಿ
ಬಾಳೋನು ಪ್ರೀತಿ ಮನಿ ಕ.ಟ್ಟಿ.
ಜಗ ಐತಿ ಎಡವಟ್ಟಿ ಬರಬೇಕ ನಾವ್ ದಾಟಿ
ಬಾಳೋನು ಪ್ರೀತಿ ಮನಿ ಕ.ಟ್ಟಿ.
ನಿಲ್ಲೋನು ಎದೆ ತಟ್ಟಿ ಮನಸಿರಲಿ ಗಟ್ಟಿಮುಟ್ಟಿ
ಬಾ ಒಳಗ ಹೊಸ್ತೀಲ ದಾ.ಟಿ.
ನಾ ಕಟ್ಟಾಕ ತಂದೀನಿ.
ನಾ ಕಟ್ಟಾಕ ತಂದೀನಿ. ನಿನ್ನ ಕೊಳ್ಳಾಗ ಗುಳದಾಳಿ
ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ
ಹುಡುಗಿ ಒಣಗ್ಯಾವ ಹೂಬಳ್ಳಿ.
ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ
ಹುಡುಗಿ ಒಣಗ್ಯಾವ ಹೂಬಳ್ಳಿ..
ಏನು ತಿಳಿದಾಂಗ ಹೊಂಟಿ ಮಳ್ಳಿ.
ಏನು ತಿಳಿದಾಂಗ ಹೊಂಟಿ ಮಳ್ಳೀ.
ಗೆಳತಿ ಅಂಗಳಕ ಬಾರ ಹೊಳ್ಳಿ
ನನ್ನಾ. ಅಂಗಳಕ ಬಾರ ಹೊಳ್ಳಿ.
ನಾ. ಮರತಿಲ್ಲ ನಿನ್ನ ಹಳ್ಳಿ.
ನೆನಪು ಬರತೈತಿ ಹೊಳ್ಳಿ ಹೊಳ್ಳಿ.
ನಾ. ಮರತಿಲ್ಲ ನಿನ್ನ ಹಳ್ಳಿ.
ನೆನಪು ಬರತೈತಿ ಹೊಳ್ಳಿ ಹೊಳ್ಳಿ.
ಹುಡುಗಾಟಾದ ನಿನ್ನ ಛಾ.ಳಿ.
ಹುಡುಗಾಟಾದ ನಿನ್ನ ಛಾ.ಳಿ..ಹಾ.ಡಿ
ಆಡಿದ ಆ ಓಕುಳಿ
ಹಾ.ಡಿ ಆಡಿದ ಆ ಓಕುಳಿ
ನಾ. ಮರತಿಲ್ಲ ನಿನ್ನ ಹಳ್ಳೀ..