ರಾ: ಚೆಲುವಿನಾ ತಾರೆ ತಾರೆ ತಾರೆ
ಒಲವಿನ ಧಾರೆ….
ಭಾಮಿನಿ ಬಾರೇ… ಅಗಲಿರಲಾರೆ
ಚೆಲುವಿನಾ ತಾರೆ ಒಲವಿನ ಧಾರೆ
ಭಾಮಿನಿ ಬಾರೇ ಆಗಲಿರಲಾರೆ
ಕನಸಲೂ ನೀನೇ ಮನಸಲೂ ನೀನೇ
ನನ್ನೀ ಪ್ರಾಣದ ಪ್ರಾಣವು ನೀನೇ
ಕಾಣದೆ ನಿನ್ನ ನಾನಿರಲಾರೆ
ಸು: ಸ್ವಾಮಿಯು ನೀನು ಸೇವಕಿ ನಾನು
ಪ್ರೇಮದ ಪೂಜೆಗೆ ನಾ ಕಾದಿಹೆನು
ಪ್ರೇಮದ ಪೂಜೆಗೆ ನಾ ಕಾದಿಹೆನು
*ಅಪ್ಲೋಡ್. ರಘು *
ರಾ: ನೆನೆಯುತ ನಿನ್ನ ಕರೆಯುವ ಮುನ್ನ
ದರುಷನಕ್ಕೆಂದೇ ಧಾವಿಸಿ ಬಂದೆ
ಸು: ನನ್ನೇ ನಿನಗೆ ಕಾಣಿಕೆ ತಂದೆ
ಸ್ವೀಕರಿಸೆನ್ನ ಕರುಣಿಸಿ ಎಂದೆ
ರಾ: ಓ..ನಿನ್ನಲ್ಲೇ ನಾನು ಒಂದಾಗಿರಲು
ಪ್ರೇಮದ ಕಾಣಿಕೆ ನನಗಿನ್ನೇಕೆ
ಭಾಮಿನಿ ಬಾರೇ ಆಗಲಿರಲಾರೆ
ಜಾ: ಸ್ವಾಮಿಯು ನೀನು ಸೇವಕಿ ನಾನು
ಪ್ರೇಮದ ಪೂಜೆಗೆ ನಾ ಕಾದಿಹೆನು
ಪ್ರೇಮದ ಪೂಜೆಗೆ ನಾ ಕಾದಿಹೆನು…
* ಅಪ್ಲೋಡ್ ರಘು .ಡಿ *
ಸು: ಆಸೆಯ ಲತೆಗೆ ಆಸರೆಯಾದೆ
ಬಾಳಿನ ಬಾನಿಗೆ ಭಾಸ್ಕರನಾದೆ
ರಾ: ಪ್ರೇಮದ ಸುಮದ ಸೌರಭವಾದೆ
ಪ್ರಣಯದ ಪಯಣಕೆ ನೀ ಜೊತೆಯಾದೆ
ಸು: ಓ..ನಿನ್ನನುರಾಗದ ಉಯ್ಯಾಲೆಯಲಿ
ತೂಗುತ ಆಡುವ ಭಾಗ್ಯವ ತಂದೆ
ಬಾ ಹೃದಯೇಶ ಪ್ರಭು ಶ್ರೀನಿವಾಸ
ರಾ: ಕನಸಲೂ ನೀನೇ ಮನಸಲೂ ನೀನೇ
ಸು: ನನ್ನೀ ಪ್ರಾಣದ ಪ್ರಾಣವು ನೀನೇ
ಕಾಣದೆ ನಿನ್ನ ನಾನಿರಲಾರೆ
ಚೆಲುವಿನಾ ತಾರೆ ಒಲವಿನ ಧಾರೆ
ಭಾಮಿನಿ ಬಾರೇ ಅಗಲಿರಲಾರೆ
ಅಗಲಿರಲಾರೆ….. ಅಗಲಿರಲಾರೆ…
"
{ಅಪ್ಲೋಡ್ .ರಘು. ಡಿ.