menu-iconlogo
huatong
huatong
vijaya-bhaskar-suryangu-chandrangu-cover-image

Suryangu Chandrangu

Vijaya Bhaskarhuatong
palmsandparadisehuatong
歌詞
作品
ಸಾಹಿತ್ಯ: ಎಂ.ಎನ್. ವ್ಯಾಸರಾವ್

ಸಂಗೀತ: ವಿಜಯಭಾಸ್ಕರ

ಗಾಯನ: ರವಿ

ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು

ನಗ್ತಾದ ಭೂತಾಯಿ ಮನಸು

ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು

ನಗ್ತಾದ ಭೂತಾಯಿ ಮನಸು

ರಾಜಂಗೂ ರಾಣೀಗೂ ಮುರಿದೋದ್ರೆ ಮನಸು

ಅರಮನ್ಯಾಗೆ ಏನೈತೆ ಸೊಗಸು,

ಅರಮನ್ಯಾಗೆ ಏನೈತೆ ಸೊಗಸು

ಮನೆತುಂಬ ಹರಿದೈತೆ ಕೆನೆಹಾಲು ಮೊಸರು

ಎದೆಯಾಗೆ ಬೆರೆತೈತೆ ಬ್ಯಾಸರದಾ ಉಸಿರು

ಗುಡಿಯಾಗೆ ಬೆಳ್‍ಗೈತೆ ತುಪ್ಪಾದ ದೀಪ

ನುಡಿಯಾಗೆ ನಡೆಯಾಗೆ ಸಿಡಿದೈತೆ

ಕ್ವಾಪ, ಸಿಡಿದೈತೆ ಕ್ವಾಪ

ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು

ನಗ್ತಾದ ಭೂತಾಯಿ ಮನಸು

ರಾಜಂಗೂ ರಾಣೀಗೂ ಮುರಿದೋದ್ರೆ ಮನಸು

ಅರಮನ್ಯಾಗೆ ಏನೈತೆ ಸೊಗಸು,

ಅರಮನ್ಯಾಗೆ ಏನೈತೆ ಸೊಗಸು

ಬೆಳದಿಂಗಳು ಚೆಲ್ಲೈತೆ ಅಂಗಳದಾ ಒರಗೇ

ಕರಿಮೋಡ ಮುಸುಕೈತೆ ಮನಸಿನಾ ಒಳಗೇ

ಬಯಲಾಗೆ ತುಳುಕೈತೆ ಅರುಸದಾ ಒನಲು

ಪ್ರೀತಿಯಾ ತೇರಿಗೇ ಬಡಿದೈತೆ ಸಿಡಿಲು

ಬಡಿದೈತೆ ಸಿಡಿಲು

ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು

ನಗ್ತಾದ ಭೂತಾಯಿ ಮನಸು

ರಾಜಂಗೂ ರಾಣೀಗೂ ಮುರಿದೋದ್ರೆ ಮನಸು

ಅರಮನ್ಯಾಗೆ ಏನೈತೆ ಸೊಗಸು,

ಅರಮನ್ಯಾಗೆ ಏನೈತೆ ಸೊಗಸು

ಮುಂಬಾಗಿಲ ರಂಗೋಲಿ ಮನಗೈತೆ ಆಯಾಗೀ

ಕಿರುನಗೆಯ ಮುಖವೆಲ್ಲ ಮುದುಡೈತೆ ಸೊರಗೀ

ಆನಂದ ಸಂತೋಸ ಈ ಮನೆಗೆ ಬರಲೀ

ಬೇಡುವೆನು ಕೈಮುಗಿದು

ಆ ನನ್ನ ಸಿವನಾ,ಆ ನನ್ನ ಸಿವನಾ

ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು

ನಗ್ತಾದ ಭೂತಾಯಿ ಮನಸು

ರಾಜಂಗೂ ರಾಣೀಗೂ ಮುರಿದೋದ್ರೆ ಮನಸು

ಅರಮನ್ಯಾಗೆ ಏನೈತೆ ಸೊಗಸು,

ಅರಮನ್ಯಾಗೆ ಏನೈತೆ ಸೊಗಸು

更多Vijaya Bhaskar熱歌

查看全部logo