~~ಅಪ್ಲೋಡರ್~~
~ ಪವರ್ ಪ್ರವೀಣ್-ಮೌನ~
M:-ಪ್ರೇಮವೇ ಪ್ರೇಮವೇ…
ಪ್ರೀತಿಯ ರಾಗವೇ…
M:-ಪ್ರೇಮವೇ ಪ್ರೇಮವೇ…
ಪ್ರೀತಿಯ ರಾಗವೇ…
ಹೃದಯದ ಭಾವವೇ
ಜೀವದ ಬಂಧವೇ…
ನನ್ನಂತರಾಳದಲ್ಲಿ
ಹಾಡಿ ನಲಿವ ಹಂಸವೇ…
F:-ಪ್ರೇಮವೇ ಪ್ರೇಮವೇ…
ಪ್ರೀತಿಯ ರಾಗವೇ…
ಹೃದಯದ ಭಾವವೇ
ಜೀವದ ಬಂಧವೇ…
ನನ್ನಂತರಾಳದಲ್ಲಿ
ಹಾಡಿ ನಲಿವ ಹಂಸವೇ…
M:-ಪ್ರೇಮವೇ ಪ್ರೇಮವೇ…
ಪ್ರೀತಿಯ ರಾಗವೇ…
F:-ಹೃದಯದ ಭಾವವೇ
ಜೀವದ ಬಂಧವೇ….
-ಹೆಚ್ಚಿನ ಟ್ರ್ಯಾಕ್ ಗಳಿಗಾಗಿ ಸರ್ಚ್ ಮಾಡಿ ಪವರ್ ಪ್ರವೀಣ್-
M:-ಮುಂಜಾನೆ ಇಬ್ಬನಿ ಚೆನ್ನ
ಸಂಜೆಯಲಿ ಸಾಗರ ಚೆನ್ನ
ಸಂಪಿಗೆ ಗಲ್ಲದ ಚೆಲುವ
ಬಳಿ ಇರಲು ನಾನೇ ಚೆನ್ನ
M:-ಓ…ತಾರೆಯು ಬಾನಿಗೆ ಚೆನ್ನ
ತಾವರೆಯು ನೀರಿಗೆ ಚೆನ್ನ
ತಾವರೆ ಕೆನ್ನೆಯ ಚೆಲುವೆ
ಜೊತೆಯಿರಲು ನಾನೇ ಚೆನ್ನ
F:-ಅರಿಶಿನದ ಜೊತೆಯಲ್ಲಿ
ಕುಂಕುಮವು ಚೆನ್ನ….
ಇಂಪಾದ ಸ್ವರಗಳಿಗೆ
ಗಮಕಗಳು ಚೆನ್ನ…
M:-ಶ್ರೀಮತಿಯು ನಗುತಿರಲು
ಹಾಲು ಜೇನಿಗಿಂತ ಚೆನ್ನ
F:-ಪ್ರೇಮವೇ ಪ್ರೇಮವೇ…
ಪ್ರೀತಿಯ ರಾಗವೇ…
ಹೃದಯದ ಭಾವವೇ
ಜೀವದ ಬಂಧವೇ….
M:-ಸಿರಿಗಂಧ ಸೀಮೆಯಲ್ಲಿ
ನೀ ನಡೆದು ಬರಲು ಅಲ್ಲಿ
ಸೌಗಂಧ ಘಮಿಸಲೇ ಇಲ್ಲ
ನಿನ್ನಲ್ಲೆ ಪರಿಮಳವೆಲ್ಲ
F:-ಪ್ರೀತಿಯ ಬುತ್ತಿಯ ಹಿಡಿದು
ಮಲೆನಾಡ ಮಲ್ಲಿಗೆ ಮುಡಿದು
ಹಸಿರೂರ ಬೀದಿಲಿ ನಡೆದು
ಮುದ್ದಿಸಲು ಬಂದೆ ನಿನ್ನ
F:*ಪರಿಮಳದ ಪಲ್ಲಂಗದಿ ನಾ
ಇರಿಸುವೆನು ನಿನ್ನ….
F:-ಚಂದನದ ನೀರಾದೆನು ನಾ
ನೀ ಬಳಸಿರಲು ನನ್ನ…
M:-ಓ ಗೆಳತಿ… ಓ ಗೆಳತಿ….
ನೀನೇ ನನ್ನ ಪ್ರಾಣದೊಡತಿ…
F:-ಪ್ರೇಮವೇ ಪ್ರೇಮವೇ…
ಪ್ರೀತಿಯ ರಾಗವೇ…
M:-ಹೃದಯದ ಭಾವವೇ
ಜೀವದ ಬಂಧವೇ…
F:-ನನ್ನಂತರಾಳದಲ್ಲಿ
M:-ಹಾಡಿ ನಲಿವ ಹಂಸವೇ…