menu-iconlogo
logo

Aakashave Beelali Mele

logo
Letras
ಅಪ್ಲೋಡ್: ರವಿ ಎಸ್ ಜೋಗ್ (29 04 2020)

ಸುಜಾತ ರವರ ಸಹಾಯದೊಂದಿಗೆ...

ಆಕಾಶವೇ ಬೀಳಲಿ ಮೇಲೆ

ನಾನೆಂದು ನಿನ್ನವನು

ಭೂಮಿಯೇ ಬಾಯ್ ಬಿಡಲಿ ಇಲ್ಲೇ..

ನಾನಿನ್ನ ಕೈ ಬಿಡೆನು..

ನೀನಿರುವುದೇ ನನಗಾ..ಗಿ

ಈ ಜೀವ ನಿನಗಾಗಿ...

ಆಕಾಶವೇ ಬೀಳಲಿ ಮೇಲೆ..

ನಾನೆಂದು ನಿನ್ನವನು ಳು..

ಚಿತ್ರ :ನ್ಯಾಯವೇ ದೇವರು

ಗಾಯನ: ಪಿ ಬಿ ಎಸ್

ಸಂಗೀತ: ರಾಜನ್ ನಾಗೇಂದ್ರ

ಹೆದರಿಕೆಯ ನೋ..ಟವೇಕೆ

ಒಡನಾಡಿ ನಾನಿರುವೆ..

ಹೊಸ ಬಾಳಿನ ಹಾ..ದಿಯಲ್ಲಿ

ಜೊತೆಗೂಡಿ ನಾ ಬರುವೆ

ಕಲ್ಲಿರಲಿ ಮುಳ್ಳೇ ಇರಲಿ

ನಾ ಮೊದಲು ಮುನ್ನಡೆವೆ..

ನೀನಡಿಯ ಇಡುವೆಡೆಯೇಲ್ಲಿ

ಒಲವಿನ ಹೂಹಾ..ಸುವೆ

ಈ ಮಾತಿಗೆ ಮನವೇ ಸಾಕ್ಷಿ

ಈ ಭಾಷೆಗೆ ದೇವರೆ ಸಾಕ್ಷಿ

ಇನ್ನಾದರೂ ನನ್ನ ನಂಬಿ

ನಗೆಯ ಚೆಲ್ಲು ಚೆಲುವೆ..

ಆಕಾಶವೇ ಬೀಳಲಿ ಮೇಲೆ

ನಾನೆಂದು ನಿನ್ನವನು ಳು

ಭೂಮಿಯೇ ಬಾಯ್ ಬಿಡಲಿ ಇಲ್ಲೇ..

ನಾನಿನ್ನ ಕೈ ಬಿಡೆನು..

ಅಪ್ಲೋಡ್: ರವಿ ಎಸ್ ಜೋಗ್ (29 04 2020)

ಹಸೆಮಣೆಯು ನಮಗೆ ಇಂದು

ನಾವು ನಿಂತ ತಾಣವು..

ತೂಗಾಡುವ ಹಸಿರೆಲೆಯೇ

ಶುಭ ಕೋರುವ ತೋರಣವು..

ಹಕ್ಕಿಗಳ ಚಿಲಿಪಿಲಿ ಗಾನ

ಮಂಗಳಕರ ನಾದವು..

ಈ ನದಿಯ ಕಲರವವೇ

ಮಂತ್ರಗಳ ಘೋ..ಷವು

ಸಪ್ತಪದಿ ಈ ನಡೆಯಾಯ್ತು

ಸಂಜೆರಂಗು ಆರತಿಯಾಯ್ತು

ಇಂದೀಗ ಎರಡೂ ಜೀವ

ಬೆರೆತು ಸ್ವರ್ಗವಾಯ್ತು...

ಆಕಾಶವೇ ಬೀಳಲಿ ಮೇಲೆ..

ನಾನೆಂದು ನಿನ್ನವನು..

ಭೂಮಿಯೇ ಬಾಯ್ ಬಿಡಲಿ ಇಲ್ಲೇ

ನಾನಿನ್ನ ಕೈ ಬಿಡೆನು

ನೀನಿರುವುದೆ ನನಗಾಗಿ

ಈ ಜೀವ ನಿನಗಾಗಿ

ಹಾ! ಹಾ! ಹಾ....

ಹಾ! ಹಾ! ಹಾ....

ಹಾ! ಹಾ! ಹಾ...

ಹಾ! ಹಾ! ಹಾ....

ರವಿ ಎಸ್ ಜೋಗ್

Aakashave Beelali Mele de P. B. Sreenivas - Letras y Covers