ನಿನ್ನ ಕಣ್ಣ ನೋಟದಲ್ಲೇ ನೂರು ಆಸೆ ಕಂಡೆನು
ನಿನ್ನ ಕಣ್ಣ ನೋಟದಲ್ಲೇ ನೂರು ಆಸೆ ಕಂಡೆನು
ನಿನ್ನ ತುಟಿಯ ನಗುವಿನಲ್ಲಿ
ನನ್ನೇ ಮರೆತು ಹೋದೆನು
ನಿನ್ನ ಕಣ್ಣ ನೋಟದಲ್ಲೇ ನೂರು ಆಸೆ ಕಂಡೆನು
Aaa
Aaa
Aaa aaa aaa
ನಿನ್ನ ನಡುವೆ ಕಂಡು ತಾನೇ ಬಳ್ಳಿ ಬಳುಕಿತು
ನಿನ್ನ ನಡುವೆ ಕಂಡು ತಾನೇ ಬಳ್ಳಿ ಬಳುಕಿತು
ನಿನ್ನ ನಡೆಯ ಕಂಡ ಹಂಸೆ ನಾಚಿ ಓಡಿತು
ನಿನ್ನ ನಡೆಯ ಕಂಡ ಹಂಸೆ ನಾಚಿ ಓಡಿತು
ನಿನ್ನ ನಾಟ್ಯ ಕಂಡು ನವಿಲು ಕುಣಿಯದಾಯಿತು
ಚೆಲುವಿನರಸಿ ನನ್ನ ಮನವು ಇಂದು ನಿನ್ನದಾಯಿತು
ನಿನ್ನ ಕಣ್ಣ ನೋಟದಲ್ಲೇ ನೂರು ಆಸೆ ಕಂಡೆನು
Aaa
Aaa
Aaa aaa aaa
ಸೋಲನೆಂದು ಕಾಣದಂಥ ಧೀರ ಪಾರ್ಥನು
ಸೋಲನೆಂದು ಕಾಣದಂಥ ಧೀರ ಪಾರ್ಥನು
ನಿನ್ನ ಕಣ್ಣ ಬಾಣದಿಂದ ಸೋತು ಹೋದನು
ನಿನ್ನ ಕಣ್ಣ ಬಾಣದಿಂದ ಸೋತು ಹೋದನು
ಚೆಲುವೆ ನಿನ್ನ ಸ್ನೇಹದಲ್ಲಿ ಕರಗಿ ಹೋದೆನು
ತೋಳಿನಲ್ಲಿ ಬಳಸಿದಾಗ ನಾನೇ ನೀನಾದೆನು
ನಿನ್ನ ಕಣ್ಣ ನೋಟದಲ್ಲೇ ನೂರು ಆಸೆ ಕಂಡೆನು
ನಿನ್ನ ಕಣ್ಣ ನೋಟದಲ್ಲೇ ನೂರು ಆಸೆ ಕಂಡೆನು
ನಿನ್ನ ತುಟಿಯ ನಗುವಿನಲ್ಲಿ
ನನ್ನೇ ಮರೆತು ಹೋದೆನು
ನಿನ್ನ ಕಣ್ಣ ನೋಟದಲ್ಲೇ ನೂರು ಆಸೆ ಕಂಡೆನು