ನಿನ್ನ ಮರೆಯಲಾರೆ,
ನಾ ನಿನ್ನ ಮರೆಯಲಾರೆ.
ಎಂದೆಂದೂ ನಿನ್ನ ಬಿಡಲಾರೆ ಚಿನ್ನ
ನೀನೆ ಪ್ರಾಣ ನನ್ನಾಣೆಗೂ
ನಿನ್ನ ಮರೆಯಲಾರೆ,
ನಾ ನಿನ್ನ ಮರೆಯಲಾರೆ
ಜೊತೆಗೆ ನೀನು ಸೇರಿ ಬರುತಿರೆ
ಜಗವ ಮೆಟ್ಟಿ ನಾ ನಿಲ್ಲುವೆ
ಒಲಿದ ನೀನು ನಕ್ಕು ನಲಿದರೆ
ಏನೇ ಬರಲಿ ನಾ ಗೆಲ್ಲುವೆ
ಆಹಾ.. ಲಾಲಾ ..ಲಾಲಾ. ..ಲಲಹ
ಚೆಲುವೆ ನೀನು ಉಸಿರು ಉಸಿರಲಿ
ಬೆರೆತು ಬದುಕು ಹೂವಾಗಿದೆ
ಎಂದು ಹೀಗೆ ಇರುವ ಬಯಕೆಯು
ಮೂಡಿ ಮನಸು ತೇಲಾಡಿದೆ
ನಮ್ಮ ಬಾಳು,
.ಹಾಲು ..ಜೇನು
ನಿನ್ನ ಮರೆಯಲಾರೆ,
ನಾ ನಿನ್ನ ಮರೆಯಲಾರೆ
ನೂರು ಮಾತು ಏಕೆ ಒಲವಿಗೆ
ನೋಟ ಒಂದೇ ಸಾಕಾಗಿದೆ
ಕಣ್ಣ ತುಂಬ ನೀನೆ ತುಂಬಿಹೆ
ದಾರಿ ಕಾಣದಂತಾಗಿದೆ
ಆಹಾ...ಹಾಹಹ
ಹಹ ತಾರರ
ಸಿಡಿಲೆ ಬರಲಿ ಊರೇ ಗುಡುಗಲಿ
ದೂರ ಹೋಗೆ ನಾನೆಂದಿಗೂ
ಸಾವೇ ಬಂದು ನನ್ನ ಸೆಳೆದರು
ನಿನ್ನ ಬಿಡೆನು ಎಂದೆಂದಿಗೂ
ನೋವು ನಲಿವು, .ಎಲ್ಲ .ಒಲವು
ನಿನ್ನ ಮರೆಯಲಾರೆ,
ನಾ ನಿನ್ನ ಮರೆಯಲಾರೆ
ಎಂದೆಂದೂ ನಿನ್ನ ಬಿಡಲಾರೆ ಚಿನ್ನ
ನೀನೆ ಪ್ರಾಣ ನನ್ನಾಣೆಗೂ
ನಿನ್ನ ನಾ ನಿನ್ನ
ಮರೆಯಲಾರೆ, F..ಮರೆಯಲಾರೆ
ನಾ ನಿನ್ನ .ನಾ ನಿನ್ನ
ಮರೆಯಲಾರೆ
ಮರೆಯಲಾರೆ
ಮರೆಯಲಾರೆ F.ಮರೆಯಲಾರೆ
ಮರೆಯಲಾರೆ..