ದೇವಕುಮಾರ ಭುವಿಗೆ ಬಂದನು, ಹಾಡಿ ನುತಿಸುವ
ನರರೂಪ ಧರಿಸಿ ಬಂದನು, ನುತಿಸಿ ಹಾಡುವ
ಜಗದ ಜನರ ಪಾಪಕೂಪದಿಂದ ಎತ್ತಿ ಕಾಯಲು ಬಂದ ಯೇಸುಸ್ವಾಮಿ
ಪಾಪವ ಕಳೆವ
(ಪಾಪವ ಕಳೆವ)
ಪಾಪಿಯ ಪೊರೆವ
(ಪಾಪಿಯ ಪೊರೆವ)
ಮೋಕ್ಷವ ತರುವ
(ಮೋಕ್ಷವ ತರುವ)
ದೇವರ ಪ್ರೀಯ ಕುಮಾರ, ಯೇಸುಕ್ರಿಸ್ತ
ನೀತಿಯ ಕೃಪಾನಿಧಿಯೇ ಯೇಸು ಪವಿತ್ರ ಆತ್ಮನ, ಪ್ರತಿನಿಧಿಯೇ ಯೇಸುದೇವನು
ನೀತಿಯ ಕೃಪಾನಿಧಿಯೇ ಯೇಸು ಪವಿತ್ರ ಆತ್ಮನ, ಪ್ರತಿನಿಧಿಯೇ ಯೇಸುದೇವನು
ನಿರೂಪಮ ಗುರು ಯೇಸು, ತೇಜೋಪೂರ್ಣ ನಿಧಿಯೂ
ನೂತನ ಬದುಕನು ನೀಡುವ ದೇವನು
ಬಂದ ಧರೆಗೆ, ದೇವ ಸದ್ಗುರು ನಾಧ
ಮೋಕ್ಷವ ತರುವ ದೇವಕುಮಾರ ಯೇಸುಕ್ರಿಸ್ತ
ದೇವಕುಮಾರ ಭುವಿಗೆ ಬಂದನು, ಹಾಡಿ ನುತಿಸುವ
ನರರೂಪ ಧರಿಸಿ ಬಂದನು, ನುತಿಸಿ ಹಾಡುವ
ಜಗದ ಜನರ ಪಾಪಕೂಪದಿಂದ ಎತ್ತಿ ಕಾಯಲು ಬಂದ ಯೇಸುಸ್ವಾಮಿ
ಪಾಪವ ಕಳೆವ
(ಪಾಪವ ಕಳೆವ)
ಪಾಪಿಯ ಪೊರೆವ
(ಪಾಪಿಯ ಪೊರೆವ)
ಮೋಕ್ಷವ ತರುವ
(ಮೋಕ್ಷವ ತರುವ)
ದೇವರ ಪ್ರೀಯ ಕುಮಾರ ಯೇಸುಕ್ರಿಸ್ತ
ಮರಿಯ ಮಹಾಮಾತೆಯ ಬಸುರಲಿ ಬೆಳೆದು ವರವಾಗಿ ಬಂದನು ಭೂಮಿಗೆ
ಮರಿಯ ಮಹಾಮಾತೆಯ ಬಸುರಲಿ ಬೆಳೆದು ವರವಾಗಿ ಬಂದನು ಭೂಮಿಗೆ
ಬೆಳಗಲು ಬಂದ ದಾವೀದನ ವಂಶವನು
ಕರುಣಾಪೂರ್ಣ ಯೇಸುದೇವನು