ಜಿನು ಜಿನುಗೋ............
ಜೇನಾ ಹನಿ
ಮಿನು ಮಿನುಗೋ..............
ತುಟಿಗೇ ಇಬ್ಬನಿ
ಜಿನು ಜಿನುಗೋ.....
ಜೇನಾ ಹನಿ
ಮಿನು ಮಿನುಗೋ......
ತುಟಿಗೇ ಇಬ್ಬನಿ
ಈ.........ನಯನದಲ್ಲಿ......
ಸಂಗಾತಿ ಸಂಪ್ರೀತಿ
ನಲಿನಲಿ ನಲಿಯುತಿದೆ
ಜಿನು ಜಿನುಗೋ............
ಜೇನಾ ಹನಿ
ಮಿನು ಮಿನುಗೋ......
ತುಟಿಗೇ ಇಬ್ಬನಿ
ಈ ಈ ಈ ಈ
ಈ ಈ ಈ ಈ
ಈ ಈ ಈ ಈ
ಈ ಈ ಈ ಈ
ಈ ಈ ಈ ಈ
ಒಮ್ಮೊಮ್ಮೆ ನಾನೇ
ಕೇಳೋದು ನನ್ನೇ
ನೀ ಸೂರ್ಯನ ಬಂಧುವೇ...
ನಿನ್ನನ್ನು ಕಂಡೆ
ನಾನಂದು ಕೊಂಡೆ
ನೀ ಚಂದ್ರನಾ ತಂಗಿಯೇ....
ಆ ಮಿಂಚು ಕೊಂಚ ನಿಲ್ಲದು
ಬರಿ ಮಿಂಚಿ ಹೋಗುತಿಹುದು
ನಿನ್ನ ಕಾಂತಿ ಕಂಡು ನಸು ನಾಚಿಕೊಂಡು
ಬರಿ ಮುಗಿಲಲಿ ಇಣುಕಿಹುದು
ಜಿನು ಜಿನುಗೋ............
ಜೇನಾ ಹನಿ
ಮಿನು ಮಿನುಗೋ..............
ತುಟಿಗೇ ಇಬ್ಬನಿ
ಈ.........ನಯನದಲ್ಲಿ......
ಸಂಗಾತಿ ಸಂಪ್ರೀತಿ
ನಲಿನಲಿ ನಲಿಯುತಿದೆ
ನೀ ನಕ್ಕ ಮೋಡಿ
ಆ ಚುಕ್ಕಿ ಓಡಿ
ಬಾನಿಂದಲೇ ಜಾರಿದೆ........... ಏ
ಆ ಬೆಳ್ಳಿಮೋಡ
ಬೆಳ್ಳಕ್ಕಿ ಕೂಡ
ನಿನ್ನ ನೋಡುತ ನಿಂತಿದೆ
ಆ ಚೈತ್ರ ಚಿತ್ರ ಬರೆದು
ಆ ಚಿತ್ರ ಜೀವ ತಳೆದು
ಎದೆ ಭೂಮಿಯಲ್ಲಿ ಹಸಿರನ್ನು ಚೆಲ್ಲಿ
ಹರುಷವ ಹರಡಿಹುದು
ಹಾ...ಜಿನು ಜಿನುಗೋ............
ಜೇನಾ ಹನಿ
ಮಿನು ಮಿನುಗೋ......
ತುಟಿಗೇ ಇಬ್ಬನಿ
ಈ ಈ ಈ ಈ
ಈ.........ನಯನದಲ್ಲಿ......
ಸಂಗಾತಿ ಸಂಪ್ರೀತಿ
ನಲಿನಲಿ ನಲಿಯುತಿದೆ