MOVIE: NEENELLO NANALLI
DEDICATED TO PHDDD(APPU)
UPLOADED BY ***CHETHAN***
ಆಕಾಶ ಭೂಮಿಯ ಮಡಿಲಲ್ಲಿ ಬೆಳೆದಂಥ
ಮುದ್ದಾ.ದ ಮಗುವೇನೇ ಈ ಪ್ರೀತಿ
ಎಲ್ಲಾರ ಹೃದಯದಲಿ ಅರಳುತ್ತಾ ನಲಿಯುತ್ತ
ತಂಪೆರೆವ ತಂಗಾಳಿ ಈ ಪ್ರೀತಿ..
ಇದು ಎಲೆಎಲೆಯಲ್ಲು ನೆಲೆಸಿರೋ ಹಸಿರು
ಎದೆ ಎದೆಯಲ್ಲು ಕಲೆತಿರೋ ಉಸಿರು
ಮನಗಳ ನಗುವಿನ ಸೇತುವೆ ಈ ಪ್ರೀತಿ
ಪ್ರೀತೀಯ ಭಾವಗಳೇನೆ ಭೂಮಿಯ ಮೇಲಿನ ಬಣ್ಣಗಳು
ಪ್ರೀತೀನೇಇಲ್ಲದೇ ಹೋದರೇ ಬಣ್ಣಗಳೆಲ್ಲುಂಟು
ಪ್ರೀತೀ,ಯ ರೂಪವೇ ತಾನೇ
ಎಲ್ಲೆಡೆ ಚೆಲ್ಲಿರೋ ಚೆಲುವುಗಳು
ಪ್ರೀತೀನೇ ಇಲ್ಲದೇ ಹೋದರೇ ಚೆಲುವಿನ್ನೆಲ್ಲುಂಟು
********ಕೋರಸ್**********
************************
ಚಿತ್ರ: ನೀನೆಲ್ಲೊ ನಾನಲ್ಲೆ (2006)
ಸಾಹಿತ್ಯ: ಕೆ ಕಲ್ಯಾಣ್
ಸಂಗೀತ: ರಮೇಶ್ ಕೃಷ್ಣ
ಗಾಯನ: ರಾಜೇಶ್ ಕೃಷ್ಣನ್
************************
ಗಾಳಿ
ಎಲ್ಲರುಸಿರಾಗಿ
ಈ ನಮ್ಮ ಭೂಮಿ ಮೇಲೆ ಬೀಸೋ ಕಾರಣ ಪ್ರೀ.ತೀನೇ..
ನೀರು
ಜೀವ ಜಲವಾಗಿ
ಈ ಎಲ್ಲ ಜೀವ ಜಾಲ ಕಾಯೋ ಕಾರಣ ಪ್ರೀ.ತೀನೇ..
ಬಾಳೊಂದು ಹುಡುಕಾಟ ಅಂದಾಗ ನಾವೆಲ್ಲ
ನಿತ್ಯಾನು ಹುಡುಕೋದು ಪ್ರೀತೀನೇ
ಪ್ರತಿ ಹೃದಯ ಹೊಲದಿ ಬೆಳೆಯುವ ಪೈರು
ಹರಿಯುವ ನದಿಯ ತವಕದ ಜೋರು
ಅಡವಿಯ ನಡುವಿನ ಕಲರವ ಈ ಪ್ರೀತಿ
ಆ ಆರು ಋತುಗಳು ಪ್ರೀತಿಯ ಬೇರೆ ಬೇರೆ ಮಜಲುಗಳು
ಪ್ರೀತೀ.ನೇ ಇಲ್ಲದೇ ಹೋದರೆ ಪ್ರಕೃತಿ ಇನ್ನೆಲ್ಲಿ
ಆ ಏಳು ಸ್ವರಗಳು ಪ್ರೀತಿಯ ತುಡಿತಾಮಿಡಿತ ತವಕಗಳು
ಪ್ರೀತೀ.ನೇ ಇಲ್ಲದೇ ಹೋದರೆ ಸಂಗೀತ ಎಲ್ಲಿ
************************
Karaoke Creatde & Uploaded by
***CHETHAN***
************************
********ಕೋರಸ್**********
ಮೋಡ
ಮೋಡವನು ಕೂಡಿ
ಮಳೆಯ ಸುರಿಸೋದು ಎಂತು ಕಂಡವರ್ಯಾರು ಭೂ.ಮೀಲಿ
ಮನಸು
ಮನಸುಗಳು ಸೇರಿ
ಒಲವುಶುರುವಾಯ್ತು ಎಂತು ಬಲ್ಲವರ್ಯಾರುನಮ್ಮಲ್ಲಿ
ಎಷ್ಟೊಂದು ಕನಸುಗಳು ಪಲ್ಲವಿಸಿ ಕಾತರಿಸಿ
ಈ ಪ್ರೀತಿ ಜನಿಸುವುದು ಎದೆಯಲ್ಲಿ
ಸುಮ ಸುಮಗಳ ಸೂಸೋ ಘಮಘಮ ಗಂಧ
ಕಂದನ ನಗುವಿನ ಕಿಲಕಿಲ ನಾದ
ನಮ್ಮಯ ಬದುಕಿನ ಅರ್ಥವೇ ಈ ಪ್ರೀತಿ
ಭೂಮೀ.ನೇ ಭೇಧಿಸಿಕೊಂಡು ಕೋಮಲ ಮೊಳಕೆ ಹೊರಬರಲು
ಚೈತ..ನ್ಯ ನೀಡುವಂಥ ಮಾಯೆ ಪ್ರೀತೀನೇ
ಗೊತ್ತೇನೇ ಅಗದ ಹಾಗೇ ಮೊಗ್ಗನು ಅರಳಿಸಿ ಹೂ ಮಾಡೋ
ಯಾರೀಗೂ ಕಾಣಿಸದಂಥ ಆ ಕೈ ಪ್ರೀತೀನೇ..