menu-iconlogo
logo

Minchu Hula Swastik

logo
Testi
ಮಿಂಚು ಹುಳ ಮಿಂಚದಿರು

ಮಿಂಚುತ ನೀ ಹಾರದಿರು

ನಿನ್ನ ಬೆಳಕಿಗೆ ಕರಗೋ

ಇದು ಕರ್ಪೂರದ ಗೊಂಬೆ ಓ ಓ ಓ

ಮಿಂಚು ಹುಳ ಮಿಂಚದಿರು

ಮಿಂಚುತ ನೀ ಹಾರದಿರು

ನಿನ್ನ ಬೆಳಕಿಗೆ ಕರಗೋ

ಇದು ಕರ್ಪೂರದ ಗೊಂಬೆ ಓ ಓ ಓ

ಮಿಂಚು ಹುಳ ಮಿಂಚದಿರು

ಮಿಂಚುತ ನೀ ಹಾರದಿರು

ಹೇ

ಹ್ಮ್ಮ್

ಆ ಮಿಂಚು ಹುಳುದ್ ಬೆಳಕಿಗೆ

ನಾನ್ ಕರ್ಪೂರದ್ ಗೊಂಬೆ ಥರ

ಕರಗಿ ಹೋದ್ರು ಪರವಾಗಿಲ್ಲ

ಯಾಕಂದ್ರೆ ಕರ್ಪೂರ ದೇವರಮುಂದೆ

ಆರತಿಯಾಗ್ ಹೇಗ್ ಕರಗಿಹೋಗುತ್ತೋ

ಹಾಗೆ ನಾನು ಕರಗಿ ನಿನ್ ಮುಂದೆ ಆರತಿ ಆಗ್ತೀನಿ

ಹಾ..

ಈ ಗಾಳಿ ಜೋರಾಗ್ ಬೀಸಿದ್ರೆ

ಗಂಧದ ಗೊಂಬೆ ಹಾಗ್ ಇರೋ ನೀನು

ಎಲ್ಲಿ ಸವೆದು ಹೋಗ್ತಿಯೋ ಅಂತ ಭಯ ಆಗ್ತಿದೆ

ಸಕ್ಕರೆ ಬೊಂಬೆ ಥರ ಇರೋ ನಿನ್ನ

ಈ ಇರುವೆಗಳು ಎಲ್ಲಿ ಮುತ್ತಿ ತಿಂದು

ಹಾಕುತ್ತೋ ಅಂತ ದಿಗಿಲಾಗ್ತಿದೆ

ಬಿರುಗಾಳಿ ಸವೆಸದಿರು ಈ ಗಂಧದ ಗೊಂಬೆಯಾ

ಇರುವೆಗಳೇ ಮುತ್ತದಿರಿ ಈ ಸಕ್ಕರೆ ಗೊಂಬೆಯಾ

ಕಾಲಿಗೆ ಸಿಗದಿರು ಕಲ್ಲೇ

ಇದು ಗಾಜಿನ ಗೊಂಬೆ ಓ ಓ ಓ

ಮಿಂಚು ಹುಳ ಮಿಂಚದಿರು

ಮಿಂಚುತ ನೀ ಹಾರದಿರು

ಹೇ

ಹಾ

ನಾ ಕಲ್ಲೆಡವಿ ಬಿದ್ದು ಒಡೆದುಹೋದ್ರು

ನಾನಿರೋದು ನಿನ್ ಹೃದಯದ ಒಳಗೆ ಅಲ್ವ?

ಹೂ ಹ್ಮ್ಮ್

ಅಲ್ಲಿ ಸಾವಿರ ಚೂರಾಗಿ ಒಂದೊಂದು

ಚೂರಲ್ಲೂ ಪ್ರೀತಿಯ ಪ್ರತಿಬಿಂಬ

ಆಗಿ ನಿಂಗೆ ಕಾಣಿಸ್ತಾನೆ ಇರ್ತೀನಿ

ರಾಜಿ

ಹಾ

ನೀನ್ ಸ್ವರ್ಗ ಅನ್ನೋ ತವರು ಮನೆ

ಇಂದ ಇಳಿದು ಭೂಮಿಗ್ ಬಂದೆ ಅಂತ

ಆ ಮೋಡಗಳು ಕಣ್ಣೇರ್ ಹಾಕಿದ್ರೆ

ಮಣ್ಣಿನ ಗೊಂಬೆ ಹಾಗಿರೋ ನೀನು ಎಲ್ಲಿ

ಕರಗಿ ಹೋಗ್ತಿಯೋ ಅಂತ ನನಗ್ ಭಯ ಆಗ್ತಿದೆ

ಆ ರವಿ ಮೇಲ್ ಬಂದು ನಿನ್ ಸೌಂದರ್ಯ ನೋಡಿದ್ರೆ

ಮಂಜಿನ ಗೊಂಬೆ ಹಾಗಿರೋ ನೀನು ಎಲ್ಲಿ ಮಾಯವಾಗ್

ಹೋಗ್ತಿಯೋ ಅಂತ ನನಗ್ ದಿಗಿಲಾಗ್ತಿದೆ

ಹ್ಮ್ಮ್ ಹ್ಮ್ಮ್

ಓ ಮೇಘಗಳೇ ಅಳದೆ ಇರಿ ಇದು ಮಣ್ಣಿನ ಗೊಂಬೆಯು..

ಓ ರವಿಯೇ ಮೇಲೇರದಿರು ಇದು ಮಂಜಿನ ಗೊಂಬೆಯು..

ಕಾಡುಗಳ್ಳರ ಭಯವೇ ಓ ದಂತದ ಗೊಂಬೆ ಓ ಓ ಓ

ಮಿಂಚು ಹುಳ ಮಿಂಚದಿರು

ಮಿಂಚುತ ನೀ ಹಾರದಿರು

ನಿನ್ನ ಬೆಳಕಿಗೆ ಕರಗೋ

ಇದು ಕರ್ಪೂರದ ಗೊಂಬೆ ಓ ಓ ಓ

ಮಿಂಚು ಹುಳ ಮಿಂಚದಿರು

ಮಿಂಚುತ ನೀ ಹಾರದಿರು