
Hakkiya HaaDige
ಹಕ್ಕಿಯ ಹಾಡಿಗೆ
ತಲೆದೂಗುವ ಹೂ
ನಾನಾಗುವ ಆಸೆ..ಏಎಏ
ಹಕ್ಕಿಯ ಹಾಡಿಗೆ
ತಲೆದೂಗುವ ಹೂ
ನಾನಾಗುವ ಆಸೆ..ಏಎಏ
ಹಸುವಿನ ಕೊರಳಿನ
ಗೆಜ್ಜೆಯ ದನಿಯು
ನಾನಾಗುವ ಆಸೆ..ಏಎಏಎ
ನಾನಾ..ಗುವ ಆಸೆ..
ಹಬ್ಬಿದ ಕಾಮನ
ಬಿಲ್ಲಿನ ಮೇಲಿನ
ಮುಗಿಲಾಗುವ ಆಸೆ...
ಹಬ್ಬಿದ ಕಾಮನ
ಬಿಲ್ಲಿನ ಮೇಲಿನ
ಮುಗಿಲಾಗುವ ಆಸೆ...ಏಎಏ
ಚಿನ್ನದ ಬಣ್ಣದ
ಜಿಂಕೆಯ ಕಣ್ಣಿನ
ಮಿಂಚಾಗುವ ಆಸೆ..ಏಎಏಎ
ಮಿಂಚಾ..ಗುವ ಆಸೆ..
ತೋಟದ ಕಂಪಿನ
ಉಸಿರಲಿ ತೇಲುವ
ಜೇನಾಗುವ ಆಸೆ...ಏಎಏ
ತೋಟದ ಕಂಪಿನ
ಉಸಿರಲಿ ತೇಲುವ
ಜೇನಾ..ಗುವ ಆಸೆ..ಏಎಏ
ಕಡಲಿನ ನೀಲಿಯ
ನೀರಲಿ ಬಳುಕುವ
ಮೀನಾಗುವ ಆಸೆ..ಏಎಏಎ
ಮೀನಾ..ಗುವ ಆಸೆ...
ಸಿಡಿಲನು ಕಾರುವ
ಬಿರುಮಳೆಗಂಜದೆ
ಮುನ್ನಡೆಯುವ ಆಸೆ..ಏಎಏ
ಸಿಡಿಲನು ಕಾರುವ
ಬಿರುಮಳೆಗಂಜದೆ
ಮುನ್ನಡೆಯುವ ಆಸೆ..ಏಎಏ
ನಾಳೆಯ ಬದುಕಿನ
ಇರುಳಿನ ತಿರುವಿಗೆ
ದೀಪವನಿಡುವಾಸೆ...ಏಎಏಎ
ದೀಪವನಿಡುವಾ..ಸೆ...