ಅಪ್ಲೋಡ್: ರವಿ ಎಸ್ ಜೋಗ್
ಸುಜಾತ ರವರ ಸಹಾಯದೊಂದಿಗೆ...
ಓಡುವ ನದಿ ಸಾಗರವ ಬೆರೆಯಲೆ ಬೇಕು
ನಾನು ನೀನು ಎಂದಾದರು ಸೇರಲೆ ಬೇಕು
ಸೇರಿ ಬಾಳಲೆ ಬೇಕು ಬಾಳು ಬೆಳಗಲೆ ಬೇಕು..
ಹೃದಯ ಹಗುರಾಯಿತು...
ಬದುಕು ಜೇನಾಯಿತು....
ನಿನ್ನ ವಚನ ಹೊಸಬಾಳಿಗೆ ನಾಂದಿಯಾಯಿತು....
ಓಡುವ ನದಿ ಸಾಗರವ ಬೆರೆಯಲೆಬೇಕು.
ನಾನು ನೀನು ಎಂದಾದರು ಸೇರಲೆಬೇಕು
ಸೇರಿ ಬಾಳಲೆಬೇಕು ಬಾಳು ಬೆಳಗಲೆಬೇಕು...
ದೂರ ಬೆಟ್ಟದಲ್ಲಿ
ಪುಟ್ಟ ಮನೆಯಿರಬೇಕು
ಮನೆಯ ಸುತ್ತ ಹೂವರಾಶಿ ಹಾಸಿರಬೇಕು..
ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು...
ಮನೆಯ ಸುತ್ತ ಹೂವರಾಶಿ ಹಾಸಿರಬೇಕು...
ತಂಗಾ..ಳಿ ಜೋಗುಳವ ಹಾಡಲೆಬೇಕು..
ತಂಗಾ..ಳಿ ಜೋಗುಳವ ಹಾಡಲೆಬೇಕು..
ಬಂಗಾರದ ಹೂವೆ ನೀನು ನಗುತಿರಬೇಕು
ನನ್ನ ಜೊತೆಗಿರಬೇಕು...
ಓಡುವ ನದಿ ಸಾಗರವ ಬೆರೆಯಲೆ ಬೇಕು...
ನಾನು ನೀನು ಎಂದಾದರು ಸೇರಲೆಬೇಕು
ಸೇರಿ ಬಾಳಲೆಬೇಕು ಬಾಳು ಬೆಳಗಲೆಬೇಕು..
ಆ..ಆ..ಹಾ...
ಓ..ಹೊ..ಹೋ...
ಓ..ಹೋ..ಹೋ...
ಆ..ಅ..ಅಹಾ...
ನನ್ನ ಬಾಳ ನಗುವ
ನಿನ್ನ ಮುಖದಿ ಕಾಣುವೆ...
ಹರುಷದಲ್ಲಿ ದುಃಖದಲ್ಲಿ ಭಾಗಿಯಾಗುವೆ
ನನ್ನ ಬಾಳ ನಗುವ ನಿನ್ನ ಮುಖದಿ ಕಾಣುವೆ..
ಹರುಷದಲ್ಲಿ ದುಃಖದಲ್ಲಿ ಭಾಗಿಯಾಗುವೆ...
ಎಲ್ಲಿ ಹೋದರಲ್ಲಿ ನಿನ್ನ ನೆರಳಾಗಿರುವೆ...
ಎಲ್ಲಿ ಹೋದರಲ್ಲಿ ನಿನ್ನ ನೆರಳಾಗಿರುವೆ....
ಬಳ್ಳಿ ಮರವ ಹಬ್ಬಿದಂತೆ
ನಿನ್ನೊಡನಿರುವೆ ಬಯಕೆ ಪೂರೈಸುವೆ
ಓಡುವ ನದಿ ಸಾಗರವ ಬೆರೆಯಲೆಬೇಕು...
ನಾನು ನೀನು ಎಂದಾದರು ಸೇರಲೆಬೇಕು...
ಸೇರಿ ಬಾಳಲೆಬೇಕು
ಬಾಳು ಬೆಳಗಲೆಬೇಕು
ಹೃದಯ ಹಗುರಾಯಿತು...
ಬದುಕು ಜೇ..ನಾಯಿತು...
ನಿನ್ನ ವಚನ ಹೊಸಬಾಳಿಗೆ ನಾಂದಿಯಾಯಿತು....
ಲಾಲ ಲಾಲ ಲಾಲ ಲಾಲ ಲಲ ಲಾಲಲ ಆಹಹ ಲಾಲಲ
ಓಹೊಹೋ ಲಾಲಲ
ಉಹುಹು ಉಹುಹು
ರವಿ ಎಸ್ ಜೋಗ್