ಸಾಹಿತ್ಯ: ಚಿ.ಉದಯಶಂಕರ್
ಸಂಗೀತ:ರಾಜನ್ ನಾಗೇಂದ್ರ
ಹಾಡಿದವರು:ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ಹೆಣ್ಣು : ಪ್ರೀತಿಸು
ಸಮೀಪಿಸು
ಇನ್ನು ನಾ ಸೋತೆನು
ಬೇಡಿತು ಮನವು ಕಾಡಿತು
ಒಲವು ಸೇರು ನನ್ನನು
ಪ್ರೀತಿಸು
ಸಮೀಪಿಸು
ಪ್ರೀತಿಸು
ಸಮೀಪಿಸು
ಹೆಣ್ಣು: ನೀ ಕೋಪ ತಾಳುತ ಹೀಗೆ
ದೂರಾಗಿ ಹೋದರೆ ಹೇಗೆ
ಶರಣಾಗಿ ಬಂದ ಮೇಲೆ
ಈ ಮೌನವೇತಕೆ..ಆ ಆ ಆ ಆ ಆ
ಹಾಯಾಗಿ ಸೇರುವ ವೇಳೆ
ಒಂದಾಗಿ ಬಾಳದ ಮೇಲೆ
ಸುಖಶಾಂತಿ ಕಾಣದಾಗಾ
ಈ ಬಾಳು ಏತಕೆ
ಪ್ರೀತಿಸು
ಸಮೀಪಿಸು
ಪ್ರೀತಿಸು
ಸಮೀಪಿಸು
ಹೆಣ್ಣು : ಕಣ್ಣೀರು ಕಾಣಿಸದೇನು
ನನ್ನಲ್ಲಿ ಬೇಸರವೇನು
ಇರುಳೆಲ್ಲ ಹೀಗೆ ಇನ್ನು
ನಾ ನೋವ ತಾಳೆನು
ಗಂಡು :ಆಹಾ ಓ ಓ ಹುಂ ಹುಂ ಹುಂ
ಮುಳ್ಳಾಗಿ ದೂರಕೆ ಹೋದೆ
ಹೂವಾಗಿ ಸೇರಲು ಬಂದೆ
ಪನ್ನೀರ ಚೆಲ್ಲಿ ಮನಕೆ
ಸವಿ ಮಾತನಾಡಿದೆ
ಗಂಡು : ಪ್ರೀತಿಸು
ಹೆಣ್ಣು : ಆಹಾಹಾ
ಗಂಡು :ಸಮೀಪಿಸು
ಹೆಣ್ಣು : ಆಹಾಹಾ
ಗಂಡು :ಇನ್ನು ನಾ ಸೋತೆನು
ದೂರಿತು ಮನವು ಕಾಡಿತು
ಒಲವು ಸೇರು ನನ್ನನು
ಇಬ್ಬರು: ಲಾ ಲಾ ಲಲ್ಲ
ಲಾ ಲಾ ಲಲ್ಲ
ಅಹ್ಹಹ್ಹಾ
ಆಹ್ಹಹ್ಹಾ