ನಂದಾ ದೀಪಾ.. ಹುಟ್ಟಿದ ಮನೆಗೆ..
ಆರದ ದೀಪ ನೀ ಮೆಟ್ಟಿದ ಮನೆಗೆ..
ಬಯಸಿ ತಂದ ಈ ಅನುಬಂಧ..
ಸಾವಿರ ಸಾವಿರ ಜನ್ಮ ಇರೋವರೆಗೆ..
ಊರೆಲ್ಲಾ ಹರಸಿದರೆ ಪುಷ್ಪಾಂಜಲಿ..
ಅಣ್ಣನಾ ಹರಕೆ ಆನಂದ ಬಾಷ್ಪಾಂಜಲಿ..
ಶ್ರೀ ಗಂಧದ ಗೊಂಬೆ...
ಮೆಲ್ಲ ಮೆಲ್ಲನೆ ಬರುತಾಳಮ್ಮ..
ಈ ಪ್ರೀತಿ ಅರಮನೆಗೆ ...
ಬೆಳ್ಳಿ ಬೆಳಕು ತರುತ್ತಾಳಮ್ಮಾ..
ಮನೆತನಕ ಬಂದ ಹೆಣ್ಣು..
ಈ ಮನೆತನ ಬೆಳಗಲಿ..
ನಮ್ಮ ಹರಕೆಯು ಫಲಿಸಲಿ..
ಈ ಮನೆತನ ಬೆಳಗಲಿ..
ನಮ್ಮ ಹರಕೆಯು ಫಲಿಸಲಿ..