menu-iconlogo
logo

Araluthide Moha

logo
歌詞
ಗಾಯಕರು: ಡಾ.ರಾಜ್ ಮತ್ತು ಎಸ್.ಜಾನಕಿ

ಸಂಗೀತ: ರಾಜನ್ ನಾಗೇಂದ್

ಸಾಹಿತ್ಯ: ಚಿ.ಉದಯಶಂಕರ್

ಸುಜಾತ ರವರ ಸಹಾಯದೊಂದಿಗೆ...

ಅರಳುತಿದೆ ಮೋಹ ಹೃದಯದಲಿ ದಾಹ

ಇಂದೇಕೆ ಹೀಗೇಕೆ ಈ ರೀತಿ ನನಗೇಕೆ

ಒಲವಿನ ಕರೆ ವಿರಹದ ಸೆರೆ

ಸೇರಿ ನಮಗಾಗಿ ತಂದಂಥ

ಹೊಸ ಕಾಣಿಕೆ......ಏ

ಅರಳುತಿದೆ ಮೋಹ ಹೃದಯದಲಿ ದಾಹ

ಇಂದೇಕೆ ಹೀಗೇಕೆ ಈ ರೀತಿ ನನಗೇಕೆ

ಈ ನಿನ್ನ ಮೊಗವು ಈ ನಿನ್ನ ನಗುವು

ಬಯಕೆಯ ತುಂಬುತ ಕುಣಿಸಿದೆ

ಈ ನಿನ್ನ ಪ್ರೇಮ ಸೆಳೆದು ನನ್ನನು

ಸನಿಹ ಕರೆಯಲು ನಾ ಬಂದೆ

ಈ ನಿನ್ನ ಮನಸು ಈ ನಿನ್ನ ಸೊಗಸು

ಹೊಸ ಹೊಸ ಕನಸನು ತರುತಿದೆ

ಎಂದೆಂದೂ ಹೀ..ಗೆ ಸೇರಿ ಬಾಳುವ

ಆಸೆ ಮನದಲಿ ನೀ ತಂದೆ

ಆಸೆ ಮನದಲಿ ನೀ ತಂದೆ

ಅರಳುತಿದೆ ಮೋಹ ಹೃದಯದಲಿ ದಾಹ

ಇಂದೇಕೆ ಹೀಗೇಕೆ ಈ ರೀತಿ ನನಗೇಕೆ

ಒಲವಿನ ಕರೆ ವಿರಹದ ಸೆರೆ

ಸೇರಿ ನಮಗಾಗಿ ತಂದಂಥ

ಹೊಸ ಕಾಣಿಕೆ......ಏ

ಅರಳುತಿದೆ ಮೋಹ ಹೃದಯದಲಿ ದಾಹ

ಇಂದೇಕೆ ಹೀಗೇಕೆ ಈ ರೀತಿ ನನಗೇಕೆ

ಆ...ಆ ಹಾ....ಹಾಹಾ

ಆ....ಹ ಹ ಹಾಹಾ

ಆ.....

ಲಹಾ...

ಅಹಾ ಲಲ ಲಲಾ

ಮಾತಲ್ಲಿ ರಸಿಕ ಪ್ರೀತಿಲಿ ರಸಿಕ

ಬಲ್ಲೆನು ರಸಿಕರ ರಾಜನೇ

ಈ ನನ್ನ ಹೃದಯ ರಾಜ್ಯ ನೀಡುವೆ

ಸೋತು ಇಂದು ನಾನು ನಿನ್ನಲ್ಲಿ

ನೀ ನನ್ನ ಜೀವ ನಿನ್ನಲ್ಲೆ ಜೀವ

ಜೀವದಿ ಜೀವವು ಬೆರೆತಿದೆ

ನಿನ್ನಿಂದ ನಾ..ನು ಬೇರೆಯಾದರೆ

ಜೀವ ಉಳಿಯದು ನನ್ನಲ್ಲಿ

ಜೀವ ಉಳಿಯದು ನನ್ನಲ್ಲಿ

ಅರಳುತಿದೆ ಮೋಹ ಹೃದಯದಲಿ ದಾಹ

ಇಂದೇಕೆ ಹೀಗೇಕೆ ಈ ರೀತಿ ನನಗೇಕೆ

ಒಲವಿನ ಕರೆ ವಿರಹದ ಸೆರೆ

ಸೇರಿ ನಮಗಾಗಿ ತಂದಂಥ ಹೊಸ ಕಾಣಿಕೆ......ಏ

ಅರಳುತಿದೆ ಮೋಹ ಹೃದಯದಲಿ ದಾಹ

ಲಾ ರ ರ...ಆ ಆ ಹಾ

ಆ ಆ ಹಾ...ಆ ಆ ಹಾ

ಆ ಆ ಹಾ...ಆ ಆ ಹಾ

ರವಿ ಎಸ್ ಜೋಗ್

Araluthide Moha Rajkumar/S. Janaki - 歌詞和翻唱