ಚಿತ್ರ : ಬೆಸುಗೆ; ಹಾಡು: ಅರೆರೆರೆ ಎಂಥ ಗಂಡಿಗೆ
ಗಾಯಕರು : ಡಾ|| ಪಿ.ಬಿ.ಶ್ರೀನಿವಾಸ್ ಹಾಗು ಕಸ್ತೂರಿ ಶಂಕರ್
ಸಂಗೀತ : ವಿಜಯಭಾಸ್ಕರ್ ; ಸಾಹಿತ್ಯ : ಚಿ.ಉದಯಶಂಕರ್
ಅಪ್ಲೋಡ್ : ಪಿ.ಆರ್.ನಂದನ್
೦೮ <><><><><><><>
[ಗಂಡು] ಅರೆರೆರೆ ಎಂಥ ಗಂಡಿಗೆ
ಅರೆರೆರೆ ಎಂಥ ಗುಂಡಿಗೆ
ಭಲೇ ಭಲೇ ಕಂಡಕೂಡಲೇ
ಅವಳ ಬಯಸೇ ಕೂಡಿತು ****
[ಹೆಣ್ಣು] ಅರೆರೆರೆ ಎಂಥ ಹೆಣ್ಣಿದು
ಅರೆರೆರೆ ಎಂಥ ಕಣ್ಣಿದು
ಭಲೇ ಭಲೇ ಒಂದೇ ನೋಟದಿ
ಅವಳ ಮನವ ಕಾಡಿತು ****
೫೧ <><><><><><>
[ಗಂಡು] ಮೀನಾ ಕಣ್ಣು ಬಾ ಎಂದಿತೇನು
ಜೆನ ತುಟಿಯ ಕಂಡಾಸೆಯೇನೋ....
ರೂಪ ಕಂಡು ನೀ ಸೋತೆಯೇನು
ಜೋಡಿ ಇಂದು ಬೇಕಾಯಿತೇನು
[ಹೆಣ್ಣು] ಅಂತೂ ಇಂತೂ ನೀ ಬೆರಗಾದೆ
ಅಂದ ಕಂಡು ನೀ ಸೆರೆಯಾದೆ
ಜಾಣೆ ಮಾತಾಡು ಈ ಮೌನವೇಕೆ
[ಗಂಡು] ಅರೆರೆರೆ ಎಂಥ ಗಂಡಿಗೆ
ಅರೆರೆರೆ ಎಂಥ ಗುಂಡಿಗೆ
ಭಲೇ ಭಲೇ ಕಂಡಕೂಡಲೇ
ಅವಳ ಬಯಸೇ ಕೂಡಿತು ****
೫೫ <><><><><><><>
[ಹೆಣ್ಣು] ಒಂದೇ ಭಾರಿ ಬಾಳಲಿ ಮದುವೆ
ಇಂಥಾ ಭಾಗ್ಯ ಎಲ್ಲುಂಟು ಚೆಲುವೆ....
ಹಾಲು ಜೇನು ಒಂದಾದ ರೀತಿ
ಮನಸು ಮನಸು ಬೆರೆತಾಗ ಪ್ರೀತಿ
[ಗಂಡು] ನಿನ್ನ ಅವಳ ಈ ಅನುಬಂಧ
ಜನ್ಮ ಜನ್ಮದ ಋಣಾನುಬಂಧ
ಜಾಣ ಮಾತಾಡು ಈ ಮೌನವೇಕೆ
[ಹೆಣ್ಣು] ಅರೆರೆರೆ ಎಂಥ ಹೆಣ್ಣಿದು
ಅರೆರೆರೆ ಎಂಥ ಕಣ್ಣಿದು
ಭಲೇ ಭಲೇ ಒಂದೇ ನೋಟದಿ
ಅವಳ ಮನವ ಕಾಡಿತು ****
೫೯ <><><><><><><><>
[ಗಂಡು] ದುಂಬಿಯಾಸೆ ಹೂವನ್ನು ಬೆರೆವುದು
ಮೋಡದಾಸೆ ತೇಲುತಲಿರುವುದುಉ
[ಹೆಣ್ಣು] ನರಿಯ ಆಸೆ ಓಡುತಲಿರುವುದು
ನಿನ್ನ ಆಸೆ ಕಣ್ಣಲೇ ಇರುವುದು
[ಗಂಡು] ಮಂಗಳವಾದ್ಯ ಮೊಳಗುವ ಮುನ್ನ [ಹೆಣ್ಣು] ಆಹಾ
[ಹೆಣ್ಣು] ಮಂಗಳೆ ತೋರು ಈ ಮೊಗವನ್ನ...
ನಾಚಿ ಹೀಗೆ ನೀ ಇರಲೇನು ಚೆನ್ನ
[ಗಂಡು] ಅರೆರೆರೆ ಎಂಥ ಗಂಡಿಗೆ
ಅರೆರೆರೆ ಎಂಥ ಗುಂಡಿಗೆ
ಭಲೇ ಭಲೇ ಕಂಡಕೂಡಲೇ
ಅವಳ ಬಯಸೇ ಕೂಡಿತು ****
[ಹೆಣ್ಣು] ಅರೆರೆರೆ ಎಂಥ ಹೆಣ್ಣಿದು
ಅರೆರೆರೆ ಎಂಥ ಕಣ್ಣಿದು
ಭಲೇ ಭಲೇ ಒಂದೇ ನೋಟದಿ
ಅವಳ ಮನವ ಕಾಡಿತು
[ಇಬ್ಬರು] ಲಲಲಲ ಲಲ್ಲಾ ಲಾ ಲಲ
ಲಲಲಲ ಲಲ್ಲಾ ಲಾ ಲಲ
ಲಲಲಲ ಲಲ್ಲಾ ಲಾ ಲಲ
ಲಲಲ ಲಲ್ಲಾ ಲಾ ಲಲ... ***