ಹಸುವಿನ ವೇಷದ ಹೆಬ್ಬುಲಿ
ನೀನು ನೀನು ನೀನು
ನಿನ್ ವೇಷವ ಕಳಚಿದ ಭೂಪತಿ
ನಾನು ನಾನು ನಾನು
ಭೂಪತಿ ರಂಗಾ ನಾನು.....
ಹಸುವಿನ ವೇಷದ ಹೆಬ್ಬುಲಿ
ನೀನು ನೀನು ನೀನು
ನಿನ್ ವೇಷವ ಕಳಚಿದ ಭೂಪತಿ
ನಾನು ನಾನು ನಾನು
ಭೂಪತಿ ರಂಗಾ ನಾನು.....
.
ಚಿತ್ರ - ಭೂಪತಿ ರಂಗ
ಮೂಲ ಗಾಯಕರು - ಡಾ||ಪಿ.ಬಿ.ಶ್ರೀನಿವಾಸ್
.
ದೊಡ್ಡ ಹೆಸರಿನ ಮರೆಯಲ್ಲಿ
ನೀ ಮಾಡಿದ ಪಾಪಗಳೆಷ್ಟೋ
ಆ ಪಾಪಗಳೆಲ್ಲವ ಮುಚ್ಚಲು
ನೀನು ಹೂಡಿದ ತಂತ್ರಗಳೆಷ್ಟೋ
ಪುಣ್ಯದ ಮಾತು ಬಾಯಲ್ಲಿ
ಬರೇ ಪಾಪವೇ ತುಂಬಿದೆ ಮನದಲ್ಲಿ
ಸಂಚು ವಂಚನೆ ಕಪಟ ಯೋಚನೆ
ನಿನ್ನ ಹೆಸರಿಗೆ ಸರಿಯೇನು**
ಹಸುವಿನ ವೇಷದ ಹೆಬ್ಬುಲಿ
ನೀನು ನೀನು ನೀನು
ನಿನ್ ವೇಷವ ಕಳಚಿದ ಭೂಪತಿ
ನಾನು ನಾನು ನಾನು
ಭೂಪತಿ ರಂಗಾ ನಾನು.....
.
ಸಂಗೀತ - ವಿಜಯಭಾಸ್ಕರ್
ಸಾಹಿತ್ಯ - ಗೀತಪ್ರಿಯ
ಸಮರ್ಪಣೆ - ಪಿ.ಆರ್.ನಂದನ್ ಭಟ್
.
ದುಷ್ಟ ರಾವಣರು ಎಷ್ಟಿಹರೋ
ಶ್ರೀ ರಾಮನ ಸುಂದರ ವೇಷದಲಿ
ಎಷ್ಟು ಅಧರ್ಮವ ಮಾಡುತಿರುವರೋ
ಸತ್ಯಧರ್ಮದಾ ಹೆಸರಿನಲೀ
ನೋಡಲು ಅವರು ಉಪಕಾರಿ
ಆದರೆ ನಿಜದೆ ಅನಾಚಾರಿ
ಮಾನವ ಜಾತಿಗೆ ಇಂಥವರು
ಕಳಂಕವಲ್ಲದೆ ಇನ್ನೇನು***
ಹಸುವಿನ ವೇಷದ ಹೆಬ್ಬುಲಿ
ನೀನು ನೀನು ನೀನು
ನಿನ್ ವೇಷವ ಕಳಚಿದ ಭೂಪತಿ
ನಾನು ನಾನು ನಾನು
ಭೂಪತಿ ರಂಗಾ ನಾನು ಹೇ ಹೇ
.
ನಿನ್ನದೇ ಸ್ವಾರ್ಥದ ಸಲುವಾಗಿ
ನಿಸ್ಸ್ವಾರ್ಥಿಯ ತೆರೆದಿ ನಟಿಸುವೆಯ
ದಾನವ ನೀಡುವ ನೆಪದಲ್ಲಿ
ದೀನರ ಮಾನವ ದೋಚುವೆಯ
ಈ ನಾಟಕ ಮುಗಿಯಲೇ ಬೇಕು
ಅಂಕದ ಪರದೆ ಜಾರಲೇ ಬೇಕು
ಬಯಲಿಗೆ ನೀನು ಬರಲೇಬೇಕು
ನ್ಯಾಯಕೆ ನೀ ತಲೆ ಬಾಗಲೇಬೇಕು***
ಹಸುವಿನ ವೇಷದ ಹೆಬ್ಬುಲಿ
ನೀನು ನೀನು ನೀನು
ನಿನ್ ವೇಷವ ಕಳಚಿದ ಭೂಪತಿ
ನಾನು ನಾನು ನಾನು
ಭೂಪತಿ ರಂಗಾ ನಾನು..... ಹೇ ಹೇ....ಯ್