ಚಿತ್ರ : ನಮ್ಮ ಊರು ; ಹಾಡು : ಹೋಗದಿರಿ ಸೋದರರೇ
ಮೂಲ ಗಾಯಕರು : ಡಾ।। ಪಿ.ಬಿ.ಶ್ರೀನಿವಾಸ್
ಸಂಗೀತ : ಆರ್.ರತ್ನ; ಸಾಹಿತ್ಯ: ಸಿ.ವಿ.ಶಿವಶಂಕರ್
ಅಪ್ಲೋಡ್ : ಪಿ.ಆರ್.ನಂದನ್ ಭಟ್
೧೦ <><><><><>
ಹೋಗದಿರೀ.... ಸೋದರರೇ
ಹೋಗದಿರೀ.... ಬಂಧುಗಳೇ
ಮನೆಯನು ತೊರೆದು ಹೋಗುವಿರಾ
ಮನಗಳ ಮರೆತು ಅಗಲುವಿರಾ
ಇಲ್ಲಿಗೆ ಮುಗಿಯದು ಋಣಾನುಬಂಧ
ಊರಿನ ಸೋದರ ಸಂಬಂಧಾ
ನಮ್ಮೂರಿನ ಸೋದರ ಸಂಬಂಧ
ಹೋಗದಿರೀ ಸೋದರರೇ
ಹೋಗದಿರೀ ಬಂಧುಗಳೇ
೨೮ <><><><><><>
ಚಿನ್ನವ ಬೆಳೆಯುವ ಮಣ್ಣನ್ನು ಮರೆತು
ಅನ್ನಕೆ ಕೈಯನು ಚಾಚುವಿರಾ
ಹಿಡಿ ಅನ್ನಕೆ ಕೈಯನು ಚಾಚುವಿರಾ
ಹುಟ್ಟಿದ ಊರನು ಬಿಟ್ಟು ಹೋದರೆ
ಕಟ್ಟುವರಾರೀ ನಮ್ಮೂರಾ
ಕೆರೆ ಕಟ್ಟೆಯ ಬಯಸುವ ನಮ್ಮೂರಾ
ಹೋಗದಿರೀ ಸೋದರರೇ
ಹೋಗದಿರೀ ಬಂಧುಗಳೇ
೨೪ <><><><><><><><>
ನಾವೆಲ್ಲ ಹುಟ್ಟಿ ಬೆಳೆದುದೇ ಇಲ್ಲಿ
ರಾಮಾಯಣವು ಬದುಕಿಹುದಿಲ್ಲಿ
ಮಹಾಭಾರತ ನಡೆದುದೆ ಇಲ್ಲಿ
ಕಲ್ಲು ಕಲ್ಲು ಕಥೆ ಹೇಳುವುದಿಲ್ಲಿ...
ಹೋಗದಿರೀ ಸೋದರರೇ
ಹೋಗದಿರೀ ಬಂಧುಗಳೇ
೧೧ <><><><><>
ನೀವೆಲ್ಲಿ ಹೋದರು ಬರಲೇಬೇಕು
ನಮ್ಮೂರಿನಲ್ಲೇ ಬದುಕಲು ಬೇಕು
ಪರದೇಶದಲ್ಲೂ ಸ್ಥಳ ನಿಮಗಿಲ್ಲ
ಹುಟ್ಟಿದ ಊರೇ ನಮಗೆಲ್ಲ....